
ನವದೆಹಲಿ: ದೇಶದಲ್ಲಿ ಕೊರೊನಾವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಜನತಾ ಕರ್ಫ್ಯೂ’ ನಡೆಸಲು ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.
My address to the nation. #IndiaFightsCorona https://t.co/w3nMRwksxJ
— Narendra Modi (@narendramodi) March 19, 2020
ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಕೆಲ ವಾರಗಳು ನನಗೆ ಬೇಕಾಗಿದೆ. ಕೊರೊನಾವೈರಸ್ ಗೆ ಇನ್ನೂ ಸರಿಯಾದ ಲಸಿಕೆ ಸಿಕ್ಕಿಲ್ಲ. ಜಗತ್ತು ಸಮಸ್ಯೆಯನ್ನು ಎದುರಿಸುತ್ತಿದೆ. ದೊಡ್ಡ ದೇಶಗಳಲ್ಲೂ ಈ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಈ ಮಹಾಮಾರಿ ಹರಡುವುದಿಲ್ಲ ಎಂದು ನಾವು ಆಲೋಚಿಸುವುದು ತಪ್ಪು ಎಂದವರು ಹೇಳಿದರು.
ದೇಶದ ನಾಗರಿಕರು ಕೇಂದ್ರ, ರಾಜ್ಯ ಸರಕಾರಗಳ ಸೂಚನೆಗಳು ಪಾಲಿಸಬೇಕು ಈ ಮೂಲಕ ಸೋಂಕುಪೀಡಿತರಾಗುವುದರಿಂದ ನಾವು ಪಾರಾಗಬೇಕು. ಇತರರೂ ನಮ್ಮಿಂದ ತೊಂದರೆಗೊಳಗಾಗಬಾರದು. ಮನೆಯಿಂದಲೇ ವ್ಯವಹಾರ, ಉದ್ಯಮ, ಕೆಲಸಗಳನ್ನು ಮಾಡಿ ಎಂದವರು ಕರೆ ನೀಡಿದರು.
PM #NarendraModi appeals People not to indulge in panic buying#IndiaFightsCorona | #CoronaVirusUpdates | #COVID19 pic.twitter.com/rnFB5Dr1zi
— All India Radio News (@airnewsalerts) March 19, 2020
ಇದೇ ಸಂದರ್ಭ ಜನರಿಂದ ಮತ್ತೊಂದು ಬೆಂಬಲವನ್ನು ಕೇಳಿದ ಅವರು, ಜನರು ‘ಜನತಾ ಕರ್ಫ್ಯೂ’ವನ್ನು ಹೇರಬೇಕು ಎಂದರು. “ಜನರಿಂದ ಜನರಿಗಾಗಿ ಜನರೇ ಹೇರುವ ಕರ್ಫ್ಯೂ ‘ಜನತಾ ಕರ್ಫ್ಯೂ’. ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಜನರು ಈ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಸಮಯದಲ್ಲಿ ಮನೆಯಿಂದ ಹೊರಬರಬೇಡಿ, ಮಾರುಕಟ್ಟೆಗೆ ಹೋಗಬೇಡಿ. ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಲಭಿಸುತ್ತದೆ. ರಾಜ್ಯ ಸರಕಾರಗಳು ಈ ಬಗ್ಗೆ ಗಮನಹರಿಸಬೇಕು. ಜನತಾ ಕರ್ಫ್ಯೂಗೆ ಬೇಕಾದ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಂಘಟನೆಗಳು, ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಈ ಬಗ್ಗೆ ಕೆಲಸ ಮಾಡಬೇಕು. ಈ ಬಗ್ಗೆ ಸಾಧ್ಯವಾದರೆ 10 ಜನರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಬೇಕು” ಎಂದವರು ಕರೆ ನೀಡಿದರು.
You must be logged in to post a comment.