ದೇಶಾದ್ಯಂತ ಬೇಸಿಗೆಯ ರಣಬಿಸಿಲು: ಈ ರಾಜ್ಯದಲ್ಲಿ 48 ಡಿಗ್ರಿ ತಲುಪಿದ ತಾಪಮಾನ

ಬೆಂಗಳೂರು: ರಾಜ್ಯದ ಉತ್ತರ ಜಿಲ್ಲೆಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರಣಬಿಸಿಲು ಮುಂದುವರಿದಿದ್ದು, ತಾಪಮಾನ 43 ಡಿಗ್ರಿಗಿಂತ ಹೆಚ್ಚಾಗಿದೆ.

ಮಹಾರಾಷ್ಟ್ರದ ಚಂದ್ರಪುರದಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ತಿಂಗಳ ಅತ್ಯಧಿಕ ತಾಪಮಾನವಾಗಿತ್ತು. ಅದೇ ಸಮಯದಲ್ಲಿ, ಕನಿಷ್ಠ ತಾಪಮಾನವು 23.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ.

ರಾಜಸ್ಥಾನದಲ್ಲಿ ತೀವ್ರ ಉಷ್ಣಾಂಶ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರಿದೆ. ಚುರುದಲ್ಲಿ ಗರಿಷ್ಠ ತಾಪಮಾನವು 47.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಹೆಚ್ಚಾಗಿದೆ. ಬಿಕಾನೆರ್-ಶ್ರೀಗಂಗನಗರ 46.8-46.8 ಡಿಗ್ರಿ ಸೆಲ್ಸಿಯಸ್, ಜೈಸಲ್ಮೇರ್ 45.5 ಡಿಗ್ರಿ ಸೆಲ್ಸಿಯಸ್, ಕೋಟಾ 45.3 ಡಿಗ್ರಿ ಸೆಲ್ಸಿಯಸ್ ಮತ್ತು ಬಾರ್ಮರ್ 45.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಲಾಗಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್ ತಲುಪಿದೆ. ವಿದರ್ಭ ಪ್ರದೇಶದ ಚಂದ್ರಪುರವು 48 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಈ ಬಾರಿ ದೇಶದಲ್ಲೇ ಅತಿ ಹೆಚ್ಚು ದಾಖಲಾದ ತಾಪಮಾನ ಇದಾಗಿದೆ. ಇದೇ ರೀತಿ ಏರಿಕೆಯಾಗುತ್ತಾ ಹೋದರೆ ಮಂದಿ, ಪ್ರಾಣಿಗಳೂ ಕೂಡ ಬದುಕುವುದು ಕಷ್ಟವಾಗುತ್ತದೆ, ನೀರಿನ ಅಭಾವವೂ ಕೂಡ ತುಂಬಾ ಕಾಡುತ್ತಿದೆ.

ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬಿಸಿಲ ಧಗೆ ಹೆಚ್ಚಾಗಿರುವ ಪರಿಣಾಮ ಬೇಸಿಗೆ ರಜೆಯನ್ನೂ ಕೂಡ ಜೂನ್ 15ರವರೆಗೆ ವಿಸ್ತರಿಸಲಾಗಿದೆ.

ತೆಲಂಗಾಣದಲ್ಲಿ ನಿರಂತರ ಶಾಖವಿದೆ. ಆದಿಲಾಬಾದ್ ನಗರದಲ್ಲಿ, ಸತತ ಎರಡನೇ ದಿನಕ್ಕೆ ತಾಪಮಾನವು 46.3 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಹಿಮಾಚಲ ಪ್ರದೇಶದ ಉನಾದಲ್ಲಿ ತಾಪಮಾನವು 43 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಜಮ್ಮುನಲ್ಲಿ,

ಈ ಋತುವಿನ ಗರಿಷ್ಠ ತಾಪಮಾನವು ಬುಧವಾರ 42.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮಧ್ಯಪ್ರದೇಶ, ತೆಲಂಗಾಣ, ಜಾರ್ಖಂಡ್, ಉತ್ತರಪ್ರದೇಶ, ಹರಿಯಾಣ, ಚಂಡೀಘಢ, ದೆಹಲಿ, ಬಿಹಾರ್, ಜಾರ್ಖಂಡ್ ಮತ್ತು ಒಡಿಶಾಗಳಲ್ಲಿ ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

Scroll to Top