ನಿರಾಶ್ರಿತರಿಗೆ ಮಾಸ್ಕ್ ಹೊಲಿದು ಕೊಟ್ಟ ರಾಷ್ಟ್ರಪತಿ ಪತ್ನಿ ಸವಿತಾ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಪತ್ನಿ ದೇಶದ ಪ್ರಥಮ ಮಹಿಳೆ “ಸವಿತಾ ಕೋವಿಂದ್” ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು ನಿರಾಶ್ರಿತರಿಗೆ ಸ್ವತಃ ತಾವೇ ಕೈಯ್ಯಾರೆ ಮಾಸ್ಕ್​ಗಳನ್ನ ಹೊಲಿದುಕೊಟ್ಟಿದ್ದಾರೆ. ಈ ಮೂಲಕ ದೇಶದ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.

ರಾಷ್ಟ್ರಪತಿ ಭವನದ ಶಕ್ತಿ ಹಾಥ್ ನಲ್ಲಿ ಫೇಸ್ ಮಾಸ್ಕ್ ಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಸ್ವತಃ ಮಾಸ್ಕ್ ಧರಿಸಿಕೊಂಡು ಹೊಲಿಗೆ ಯಂತ್ರದ ಮೂಲಕ ಹಲವು ಫೇಸ್ ಮಾಸ್ಕ್ ಗಳನ್ನು ತಯಾರಿಸಿದ್ದಾರೆಂದು ತಿಳಿದುಬಂದಿದೆ.

ಇನ್ನು ಸವಿತಾ ಕೋವಿಂದ್ ಅವರು ಹೊಲಿದುಕೊಟ್ಟ ಈ ಮಾಸ್ಕ್​ಗಳನ್ನು ದೆಹಲಿಯ ನಿರಾಶ್ರಿತರಿಗೆ ಹಂಚಲಾಯಿತು ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೇಶದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್​ಗಳಿಗೆ ವಿಪರೀತ ಬೇಡಿಕೆ ಇದೆ. ಪ್ರತಿಯೊಂದು ನಗರದಲ್ಲೂ ಕೆಲ ದರ್ಜಿಗಳು ಬಟ್ಟೆಯಿಂದಲೇ ಮಾಸ್ಕ್​ಗಳನ್ನ ತಯಾರಿಸಿ ತಮ್ಮ ಜವಾಬ್ದಾರಿತನ ಮೆರೆಯುತ್ತಿದ್ದಾರೆ. ಇದೀಗ ರಾಷ್ಟ್ರಪತಿ ಪತ್ನಿ ಸವಿತಾ ಕೋವಿಂದ್ ಅವರು ತಮ್ಮ ಕೈಯಾರೇ ಮಾಸ್ಕ್ ತಯಾರಿಸಿ ಹಂಚುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Leave a Comment

Scroll to Top