ತೆರಿಗೆದಾರರಿಗೆ ಬಜೆಟ್‍ನಲ್ಲಿ ಶುಭ ಸುದ್ದಿ..! ಯಾರು ಎಷ್ಟೇಷ್ಟು ಟ್ಯಾಕ್ಸ್ ಕಟ್ಟಬೇಕು..?

ನವದೆಹಲಿ: 2020-21ರ ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈಗಿನ ಆದಾಯ ತೆರಿಗೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆಗೆ ಮುಂದಾಗಿದ್ದು ತೆರಿಗೆ ದರವನ್ನು ಇಳಿಸಿದೆ. ಈ ಮೂಲಕ ಮಧ್ಯಮ ವರ್ಗದವಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೊದಲು ಎರಡೂವರೆ ಲಕ್ಷದವರೆಗೂ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಇತ್ತು. ಅದನ್ನು ನಿರ್ಮಾಲಾಸೀತಾರಾಮನ್ ಅವರು 5 ಲಕ್ಷದವರೆಗೂ ಹೆಚ್ಚಿಸಿ ಮಧ್ಯಮ ವರ್ಗದವಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಹಿಂದಿನ ತೆರಿಗೆ ಪದ್ಧತಿ:

2.5ರಿಂದ 5 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. 5ರಿಂದ 10 ಲಕ್ಷದವರೆಗೆ ಶೇ.20ರಷ್ಟು, 10ಲಕ್ಷದಿಂದ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಈ ತೆರಿಗೆಯ ಹಂತಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಸರಳೀಕರಣ ಮಾಡಲಾಗಿದೆ.

ಪರಿಷ್ಕೃತ ತೆರಿಗೆ ಪದ್ಧತಿ:

5ರಿಂದ 10 ಲಕ್ಷದವರೆಗಿನ ಆದಾಯಕ್ಕೆ ಇದ್ದ ಶೇ.20ರಷ್ಟು ತೆರಿಗೆ ಮಿತಿಯನ್ನು ವಿಂಗಡಿಸಿ 5ರಿಂದ 7.5ಲಕ್ಷಕ್ಕೆ ಮಾರ್ಪಡಿಸಲಾಗಿದೆ. ತೆರಿಗೆಯ ದರವನ್ನು ಶೇ.10ಕ್ಕೆ ನಿಗದಿಪಡಿಸಲಾಗಿದೆ. 7.5ರಿಂದ 10 ಲಕ್ಷದವರೆಗೆ ಮತ್ತೊಂದು ಹಂತವನ್ನು ನಿಗದಿಪಡಿಸಲಾಗಿದ್ದು, ಅದಕ್ಕೆ ಶೇ.15ರಷ್ಟು ತೆರಿಗೆ ವಿದಿಸಲಾಗಿದೆ.

ಇದರಿಂದಾಗಿ 5ರಿಂದ 10 ಲಕ್ಷದೊಳಗಿನ ಆದಾಯ ಹೊಂದಿರುವವರಿಗೆ ಒಂದೇ ಹಂತದ ಬದಲಾಗಿ ಎರಡು ಹಂತದಲ್ಲಿ ತೆರಿಗೆ ವಿಧಿಸಲಾಗುತ್ತಿದೆ. 10ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಸರಾಸರಿ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು ಮತ್ತೆ ವಿಂಗಡಿಸಲಾಗಿದ್ದ್ದು, 10ರಿಂದ 12.5 ಲಕ್ಷ ಆದಾಯಕ್ಕೆ ಶೇ.20, 12.5ರಿಂದ 15ಲಕ್ಷದವರೆಗಿನ ಆದಾಯಕ್ಕೆ ಶೇ.25ರಷ್ಟು ತೆರಿಗೆ ವಿಧಿಸಲಾಗಿದೆ. 15 ಲಕ್ಷ ಮೇಲ್ಪಟ್ಟ ಆದಾಯದಾರರಿಗೆ ಶೇ.30ರಷ್ಟು ತೆರಿಗೆ ಪದ್ಧತಿ ಯಥಾರೀತಿ ಮುಂದುವರೆದಿದೆ.

* 2019-20ರ ತೆರಿಗೆ ತೆರಿಗೆ ದರ :

  • 2.5ಲಕ್ಷದವರೆಗೆ ಇಲ್ಲ
  • 2.5ರಿಂದ 5ಲಕ್ಷದವರೆಗೆ ಶೇ.5
  • 5ರಿಂದ 10 ಲಕ್ಷದವರೆಗೆ ಶೇ.20
  • 10ಲಕ್ಷ ಮೇಲ್ಪಟ್ಟು ಶೇ.30

*2020-21ರ ತೆರಿಗೆ ತೆರಿಗೆ ದರ :

  • 5ಲಕ್ಷದವರೆಗೆ ಇಲ್ಲ
  • 5ರಿಂದ 7.5 ಲಕ್ಷದವರೆಗೆ ಶೇ.10
  • 7.5ರಿಂದ 10 ಲಕ್ಷದವರೆಗೆ ಶೇ.15
  • 10ರಿಂದ 12.5ಲಕ್ಷದವರೆಗೆ ಶೇ.20
  • 12.5ರಿಂದ 15ಲಕ್ಷ ದವರೆಗೆ ಶೇ.25

Leave a Comment

Scroll to Top