ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಹಿಮಾಚಲ ಪ್ರದೇಶ: ರೋಹ್ತಂಗ್‍ನಲ್ಲಿ ವಿಶ್ವದ ಅತಿ ಉದ್ದದ ಹೆದ್ದಾರಿ, ಅಟಲ್ ಸುರಂಗ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು.

ಈ ಸುರಂಗವನ್ನು ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷಣಗಳೊಂದಿಗೆ ನಿರ್ಮಿಸಲಾಗಿದ್ದು, ಸಮುದ್ರ ಮಟ್ಟದಿಂದ ಸರಾಸರಿ 3000 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಪದೇ ಪದೇ ಹಿಮಪಾತವಾಗುತ್ತಿದ್ದ ಮನಾಲಿ ಮತ್ತು ಲೇಹ್ ನಡುವೆ ಆರು ತಿಂಗಳ ಕಾಲ ಸಂಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಅಟಲ್ ಸುರಂಗದ ವಿಶೇಷತೆಗಳಿವು:

 1. ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಅಟಲ್ ಸುರಂಗ.
 2. ಇದು 9.02 ಕಿ.ಮೀ. ಉದ್ದ ಕುದುರೆ ಲಾಳಾಕೃತಿಯಲ್ಲಿದೆ.
 3. ದ್ವಿಪಥವನ್ನು ಹೊಂದಿದೆ.
 4. ನಿತ್ಯ 3000 ಕಾರು, 1500 ಲಾರಿಗಳ ಸಂಚರಿಸಬಹುದು.
 5. ಇದು ಸರ್ವಋತು ಸುರಂಗ ಮಾರ್ಗವಾಗಿದೆ.
 6. 8 ಮೀಟರ್‌ ಅಗಲದ ರಸ್ತೆ ಇದೆ. 5.525 ಮೀ. ಎತ್ತರದ ವಾಹನ ಚಲಿಸಬಹುದು.
 7. 2002 ರಿಂದ ಈ ಸುರಂಗ ಮಾರ್ಗ ಕಾಮಗಾರಿ ಪ್ರಾರಂಭವಾಗಿದ್ದು ಈ ವರ್ಷ ಕಾಮಗಾರಿ ಪೂರ್ಣಗೊಂದಿದೆ.
 8. ಸುರಂಗವು ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ.
 9. 9.2 ಕಿ.ಮೀ ಉದ್ದವಿರುವ ಈ ಸುರಂಗದಲ್ಲಿ ಸಿಸಿ ಟಿವಿ, ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನ ಬಾಗಿಲುಗಳ ನಿರ್ಮಾಣ, ಫೈರ್ ಹೈಡ್ರಾಂಟ್ಸ್ ಅಳವಡಿಕೆ ಮಾಡಲಾಗಿದೆ.
 10. ಸುರಂಗದ ಎರಡು ಕಡೆ 1 ಮೀಟರ್‌ನಷ್ಟು ಫುಟ್‌ಪಾತ್ ಇದೆ.
 11. ಈ ಸುರಂಗದ ಒಟ್ಟು ಖರ್ಚು 3,500 ಕೋಟಿ ರೂಪಾಯಿಗಳು.
 12. ಮನಾಲಿ- ಲೇಹ್‌ ನಡುವಣ ದೂರ 46 ಕಿ.ಮೀ. ಇಳಿಕೆಯಾಗಲಿದ್ದು, ಎರಡೂ ನಗರಗಳ ಪ್ರಯಾಣ ಅವಧಿ 4ರಿಂದ 5 ತಾಸಿನಷ್ಟುಉಳಿತಾಯವಾಗಲಿದೆ.
Scroll to Top