
ಪುಣೆ: ಮಾಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಇದನ್ನು ಹರಡದಂತೆ ತಡೆಯಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಭಾರತ ಕೊರೊನಾ ವೈರಸ್ ಪರೀಕ್ಷೆಗೆ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಿಸಿದೆ. ಇದನ್ನು ತಯಾರಿಸಿದ್ದು ಓರ್ವ ಗರ್ಭಿಣಿ ಮಹಿಳಾ ವೈದ್ಯೆ. ಇದೀಗ ವೈದ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಗರ್ಭಿಣಿಯಾಗಿದ್ದರೂ ನಿರಂತರವಾಗಿ ಕೆಲಸ ಮಾಡಿದ್ದಕ್ಕೆ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪುಣೆಯ ಮೈಲ್ಯಾಬ್ ಡಿಸ್ಕವರಿ ಎಂಬ ಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥೆಯಾಗಿರುವ ಮಿನಾಲ್ ಬೋಸ್ಲೆ ಅವರು, ದೇಶದ ಮೊದಲ ಕೋವಿಡ್-19 ಕಿಟ್ ತಯಾರಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋವಿಡ್-19 ಕಿಟ್ ತಯಾರಿಕೆಯಲ್ಲಿ ತೊಡಗಿದ್ದ ತಂಡದ ನೇತೃತ್ವ ವಹಿಸಿದ್ದರು. ತಮ್ಮ ಮಗುವಿಗೆ ಜನ್ಮ ನೀಡುವ ಒಂದು ದಿನ ಮುಂಚೆಯಷ್ಟೇ ಮಿನಾಲ್ ಬೋಸ್ಲೆ ಕೋವಿಡ್ ಕಿಟ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದರು.
Entire Nation expresses its gratitude to you…
— Susanta Nanda IFS (@susantananda3) March 28, 2020
"Our kit gives the diagnosis in two and a half hours while the imported testing kits take six-seven hours," says virologist Minal Dakhave Bhosale, Mylab's research and development chief. Developed in a record time of 6 weeks.?? pic.twitter.com/5A4azJJmNp
ಮಾರಕ ಕೊರೊನಾ ವೈರಸ್ ವಿರುದ್ಧ ಒಂದಾಗಿ ಹೋರಾಡೋಣ ಎಂಬ ಪ್ರಧಾನಿ ಮೋದಿ ಕರೆಗೆ ಇಡೀ ದೇಶ ಒಗ್ಗೂಡಿದ್ದು, ಎಲ್ಲರೂ ತಮ್ಮದೇ ಆದ ಕ್ಷೇತ್ರಗಳಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಂತೆ ಮಿನಾಲ್ ಭೋಸ್ಲೆ ಅವರೂ ಕೂಡ ತಮ್ಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಗರ್ಭವತಿಯಾಗಿದ್ದಾಗ್ಯೂ ನಿರಂತರವಾಗಿ ಕೆಲಸ ಮಾಡುತ್ತಿದ್ದ ಮಿನಾಲ್ ಭೋಸ್ಲೆ ಅವರು, ಮೊದಲು ಕೋವಿಡ್ 19 ಪರೀಕ್ಷಾ ಕಿಟ್ ಸಂಶೋಧನಾ ಕಾರ್ಯ ಪೂರ್ಣಗೊಳಿಸಿ ಬಳಿಕ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಕಿಟ್ ಸಂಶೋಧನೆ ಪೂರ್ಣಗೊಂಡ 1 ದಿನದ ಬಳಿಕ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಗರ್ಭವತಿಯಾದಾಗಲೂ ನಿರಂತರವಾಗಿ ಕೆಲಸ ಮಾಡಿದ ಆಕೆಯ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್-19 ಕಿಟ್ ತಯಾರಿಸಲು ಭಾರತ ಸರ್ಕಾರದಿಂದ ಅನುಮತಿ ಪಡೆದಿದ್ದ ಮೈಲ್ಯಾಬ್ ಡಿಸ್ಕವರಿ, ಕಿಟ್ ತಯಾರಿಕಾ ತಂಡದ ನೇತೃತ್ವವನ್ನು ಮಿನಾಲ್ ಬೋಸ್ಲೆ ಅವರಿಗೆ ನೀಡಿತ್ತು.
ಕಡಿಮೆ ಅವಧಿಯಲ್ಲಿ ಕೋವಿಡ್ 19 ಪರೀಕ್ಷೆ :
ಮಿನಾಲ್ ಭೋಸ್ಲೆ ಅವರು ತಯಾರಿಸಿರುವ ಈ ಪರೀಕ್ಷಾ ಕಿಟ್ ಅತ್ಯಂತ ಕಡಿಮೆ ಅವಧಿಯಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲಿದೆ. ಕೇವಲ 2 ರಿಂದ 2-30 ಗಂಟೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸುವ ಈ ಕಿಟ್ ಸದ್ಯ ಅತ್ಯಂತ ವೇಗವಾಗಿ ಪರೀಕ್ಷೆ ನಡೆಸುವ ಸಾಧನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
You must be logged in to post a comment.