ನವದೆಹಲಿ: ಗಣರಾಜ್ಯೋತ್ಸವ ದಿನ ಹೊಸದೆಹಲಿಯಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಹಂಪಿಯ ವಿಜಯನಗರ ಸಾಮ್ರಾಜ್ಯದ ವೈಭವ ಪ್ರದರ್ಶನಗೊಳ್ಳಲಿದೆ.
ಹಂಪಿಯ ಕೇಂದ್ರಬಿಂದುವಾದ ಉಗ್ರನರಸಿಂಹ, ಹಜಾರಾಮ ದೇವಾಲಯ, ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಬೆಟ್ಟ, ಕೃಷ್ಣ ದೇವರಾಯನಿಗೆ ನಡೆದ ಪಟ್ಟಾಭಿಷೇಕ ಸಮಾರಂಭದ ಶ್ರೀಮಂತಿಕೆಯನ್ನು ಚಿತ್ರಿಸಲಾಗಿದೆ.
ವಿಜಯನಗರದ ಸಾಮ್ರಾಜ್ಯದ ವೈಭವ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವ ಸ್ತಬ್ಧಚಿತ್ರ ಈಬಾರಿಯ ಗಣರಾಜ್ಯೋತ್ಸವದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಲಿದೆ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಇದನ್ನು ನಾಳಿನ ಪರೇಡ್‌ನಲ್ಲಿ ವೀಕ್ಷಿಸಲು ಮರೆಯದಿರಿ.