ಮರಳಲ್ಲಿ ಅರಳಿತು ವಿಶ್ವ ಪಾರಂಪರಿಕ ತಾಣ ಕೊನಾರ್ಕ್​​ ದೇವಾಲಯ: ಜಪಾನ್​​​​ನಲ್ಲಿ ಈ ಅದ್ಭುತ ಕಲೆಯ ಪ್ರದರ್ಶನ

ನವದೆಹಲಿ: ಪದ್ಮಶ್ರೀ ಪುರಸ್ಕೃತ ಸುದರ್ಶನ್, ಇತಿಹಾಸಪ್ರಸಿದ್ಧ ಕೊನಾರ್ಕ್​​ ದೇವಾಲಯ ದ ಚಕ್ರವನ್ನ ಮರಳಿನಲ್ಲಿ ರಚಿಸಿದ್ದಾರೆ. ಈ ಅದ್ಭುತ ಕಲೆಯ ಫೋಟೋಗಳನ್ನ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡ್​ ಆರ್ಟ್​ ಎಂದಾಕ್ಷಣ ಥಟ್​​ ಅಂತ ನೆನಪಾಗೋದೇ ಸುದರ್ಶನ್​ ಪಟ್ನಾಯಕ್. ಒಡಿಶಾ ಮೂಲದವರಾದ ಖ್ಯಾತ ಕಲಾವಿದ ಸುದರ್ಶನ್, ಸದ್ಯ ಜಪಾನ್​​​​ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಕಲೆ ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನೂ ತೋರಿಸಿದ್ದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕೊನಾರ್ಕ್​​ನ ಸೂರ್ಯ ದೇವಾಲಯದ ಸ್ಯಾಂಡ್​ ಆರ್ಟ್​​ ಮಾಡಿದ್ದಾರೆ.

ಜಪಾನ್​​​​ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಕಲೆ ಪ್ರದರ್ಶನದಲ್ಲಿ ವಿಶ್ವದಾದ್ಯಂತ ಸುಮಾರು 21 ಕಲಾವಿದರು ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುದರ್ಶನ್​ ತಮ್ಮ ಈ ಸ್ಯಾಂಡ್​​ ಆರ್ಟ್​​ನಲ್ಲಿ ಅತ್ಯಂತ ಸಣ್ಣ ಪುಟ್ಟ ಡೀಟೇಲ್ಸ್​ ಕೂಡ ಅದ್ಭುತವಾಗಿ ಚಿತ್ರಿಸಿದ್ದಾರೆ. ಇನ್ನು ಈ ಸ್ಯಾಂಡ್​​ ಆರ್ಟ್​ ನೋಡಿ ಸಾಮಾಜಿಕ ಜಾಲತಾಣದಲ್ಲಿ ಜನರು ಶ್ಲಾಘಿಸಿದ್ದಾರೆ.

Scroll to Top