ಹೈಡ್ರೋಜನ್ ಬಳಸಿ ಆಕ್ಸಿಜನ್ ಬಿಡುಗಡೆ ಮಾಡುವ ಇಂಜಿನ್ ಕಂಡುಹಿಡಿದ ಇಂಜಿನಿಯರ್..!

ನವದೆಹಲಿ: ತಮಿಳುನಾಡಿನ ಮೆಕ್ಯಾನಿಕಲ್ ಇಂಜಿನಿಯರ್ ಪರಿಸರ ಸ್ನೇಹಿ ಎಂಜಿನ್ನನ್ನು ಡಿಸ್ಟಿಲ್ಡ್ ವಾಟರ್ ಮೂಲಕ ನಡೆಸುತ್ತಿದ್ದಾರೆ. ಮೂಲತಃ ಕೊಯಮತ್ತೂರಿನವರಾಗಿರುವ ಸೌಂತಿರಾಜನ್ ಕುಮಾರಸ್ವಾಮಿ ವಿನ್ಯಾಸಗೊಳಿಸಿದ ಇಂಜಿನ್ ವಿಶಿಷ್ಟವಾಗಿದೆ. ಇದು ಜಲಜನಕವನ್ನು ಇಂಧನ ಮೂಲವಾಗಿ ಬಳಸಿ ನಂತರ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಈ ಕುರಿತಾಗಿ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಸೌಂತಿರಾಜನ್ ಕುಮಾರಸ್ವಾಮಿ “ಈ ಎಂಜಿನ್ ಅಭಿವೃದ್ಧಿಪಡಿಸಲು ಇದು ನನಗೆ 10 ವರ್ಷಗಳನ್ನು ತೆಗೆದುಕೊಂಡಿತು. ಇದು ವಿಶ್ವದ ಈ ರೀತಿಯ ಮೊದಲ ಆವಿಷ್ಕಾರವಾಗಿದೆ. ಇದು ಜಲಜನಕವನ್ನು ಇಂಧನ ಮೂಲವಾಗಿ ಬಳಸಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ” ಎಂದು ಎಂಜಿನಿಯರ್ ತಿಳಿಸಿದರು.

ದಿನಗಳಲ್ಲಿ ಜಪಾನ್ ನಲ್ಲಿ ಈ ಇಂಜಿನ್ ಪರಿಚಯಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಅದನ್ನು ಪರಿಚಯಿಸಲಿದ್ದಾರೆ ಎಂದರು.

“ನನ್ನ ಕನಸು ಭಾರತದಲ್ಲಿ ಈ ಎಂಜಿನ್ ಅನ್ನು ಪರಿಚಯಿಸುವುದು. ನಾನು ಆಡಳಿತಗಾರರ ಎಲ್ಲಾ ಬಾಗಿಲುಗಳನ್ನು ತಟ್ಟಿದ ಮೇಲೆ ನನಗೆ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ ಆದ್ದರಿಂದ ನಾನು ಜಪಾನ್ ಸರ್ಕಾರಕ್ಕೆ ಕೇಳಿ ಈ ಅವಕಾಶವನ್ನು ಪಡೆದುಕೊಂಡೆ. ಎಂದು “ಸೌಂತಿರಾಜನ್ ಕುಮಾರಸ್ವಾಮಿ ಹೇಳಿದರು.

Leave a Comment

Scroll to Top