ಇಂದು ಮಧ್ಯರಾತ್ರಿಯಿಂದ್ಲೇ ದೇಶವೇ ಲಾಕ್‍ಡೌನ್: 21 ದಿನ ಭಾರತ ಸಂಪೂರ್ಣ ಬಂದ್;- ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಇಂದು (ಮಂಗಳವಾರ) ರಾತ್ರಿ 12 ಗಂಟೆಯಿಂದ ಇಡೀ ದೇಶ ಲಾಕ್‌ ಔಟ್‌ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ಧಾರೆ. ಭಾರತವನ್ನು ಉಳಿಸಲು, ಜನರನ್ನು, ಕುಟುಂಬವನ್ನು ಉಳಿಸಲು, ಲಾಕ್‌ ಔಟ್‌ ಅನಿವಾರ್ಯ ಎಂದು ಪ್ರಧಾನಿ ಮೋದಿ ಹೇಳಿದ್ಧಾರೆ.

ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು 21 ದಿನ ನೀವು ಮನೆಯಲ್ಲಿ ಇರಲಿಲ್ಲ ಎಂದರೆ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ ಹೋಗುತ್ತದೆ. ನೀವು ಎಲ್ಲಿದ್ದಿರೋ ಅಲ್ಲಿಯೇ ಇರಿ. ನಿಮ್ಮಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

ಕೊರೊನಾ 11 ದಿನದಲ್ಲಿ 1 ಲಕ್ಷ ಜನರಿಗೆ ತಲುಪಿದೆ. ಇನ್ನೂ 1 ಲಕ್ಷ ಜನರಿಗೆ ತಲುಪಲು ಮೂರು ದಿನಗಳು ಸಾಕು. ಆದ್ದರಿಂದ, social distinction ನಿಯಮ ಪಾಲನೆ ಮಾಡಿ, ದಯವಿಟ್ಟು ಮನೆಯಿಂದ ಹೊರ ಬರಬೇಡಿ.

ಇಡೀ ದೇಶದ ಜನರಿಗೆ ಸುದ್ದಿ ಮುಟ್ಟಿಸುತ್ತಿರುವ ಮಾಧ್ಯಮದವರ ಬಗ್ಗೆ, ಜನರನ್ನು ಕಾಪಾಡಲು ಪೊಲೀಸರ ಬಗ್ಗೆ ಸ್ವಲ್ಪ ಯೋಚಿಸಿ. ಅವರೆಲ್ಲ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

Scroll to Top