ಇನ್ಮುಂದೆ ಹುಲಿಯನ್ನ ನರಭಕ್ಷಕ ಅನ್ನಂಗಿಲ್ಲ..!

ಬೆಂಗಳೂರು: ರಾಷ್ಟ್ರ ಪ್ರಾಣಿ ಹುಲಿಯನ್ನ ಇನ್ಮುಂದೆ ನರಭಕ್ಷಕ ಅಂತ ಕರೆಯಯವಂತಿಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶ ಜಾರಿ ಮಾಡಿದೆ. ಪ್ರಾಧಿಕಾರ ಹೊರಡಿಸಿರುವ ಪರಿಷ್ಕೃತ ಕಾರ್ಯವಿಧಿಯಲ್ಲಿ ಈ ಅಂಶ ಸೇರಿದೆ.

ಹುಲಿಗಳು ಆಕಸ್ಕಿಕವಾಗಿ ಮನುಷ್ಯರನ್ನ ಕೊಂದಿರಬಹುದು. ಅದೇ ಕಾರಣಕ್ಕೆ ಹುಲಿಗಳು ನರಭಕ್ಷಕರಾಗಿ ಬದಲಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಹುಲಿಯನ್ನು ನರಭಕ್ಷಕ ಎನ್ನುವ ಬದಲು ನರ ಕಂಟಕ ಎಂದು ಕರೆಯಬಹುದಾಗಿದೆ. ಈ ಬಗ್ಗೆ ಪ್ರಾಧಿಕಾರ ತಿಳಿಸಿದೆ.

ಒಂದು ವೇಳೆ ಹುಲಿ ಮನುಷ್ಯರಿಗೆ ಉಪಟಳ ನೀಡುತ್ತಿರುವುದು ಗೊತ್ತಾದರೇ ಅದನ್ನು ತಕ್ಷಣ ಹಿಡಿಯುವ ಪ್ರಯತ್ನ ನಡೆಸಬೇಕು ಎಂದು ಆದೇಶಿಸಿದೆ. ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಖಾಸಗಿ ವ್ಯಕ್ತಿಗಳ ಪ್ರವೇಶವನ್ನು, ಶಾರ್ಪ್ ಶೂಟರ್ಗಳನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.

ಈ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Leave a Comment

Scroll to Top