
ನವದೆಹಲಿ: ಹಾಲಿ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಮಧ್ಯಮವರ್ಗದ ಜನರಿಗೆ ದೊಡ್ಡ ತೆರಿಗೆ ರಿಲೀಫ್ ನೀಡಿದ್ದು, 5 ರೂ. ಲಕ್ಷವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ.
ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಬಜೆಟ್ ಮಂಡನೆಯಲ್ಲಿ ಮಾಹಿತಿ ನೀಡಿದ ಗೋಯಲ್ ಅವರು, 5 ಲಕ್ಷ ರೂ ವರೆಗೂ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ. ಅಂತೆಯೇ ಶೇ.5 ರಷ್ಟು ಇದ್ದ ತೆರಿಗೆಯನ್ನೂ ರದ್ದು ಗೊಳಿಸಿರುವುದಾಗಿ ಘೋಷಿಸಿದರು. ಅಂತೆಯೇ ವಾರ್ಷಿಕ 6.5 ಲಕ್ಷ ರೂ ವಾರ್ಷಿಕ ಆದಾಯ ಹೊಂದಿರುವವರು ಸಣ್ಣ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಿದರೆ ಇವರಿಗೂ ಸಹ ತೆರಿಗೆ ವಿನಾಯಿತಿ ದೊರೆಯಲಿದೆ.
ಇದಲ್ಲದೆ ಹಾಲಿ ಬಜೆಟ್ ನಲ್ಲಿ ಯಾವುದೇ ರೀತಿಯ ಹೊಸ ತೆರಿಗೆ ಘೋಷಣೆ ಮಾಡಿಲ್ಲ. ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 2.4 ಲಕ್ಷ ರೂ ವರೆಗಿನ ಮನೆ ಬಾಡಿಗೆಗೆ ಮೂಲದಲ್ಲಿ ತೆರಿಗೆ ಕಡಿತ ಇಲ್ಲ. ಸ್ಟಾಂಡರ್ಡ್ ಡಿಡಕ್ಷನ್ ರೂ. 40 ಸಾವಿರದಿಂದ ರೂ.50 ಸಾವಿರಕ್ಕೆ ಹೆಚ್ಚಳ. ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಲ್ಲಿ ಉಳಿಸುವುದು ಸೇರಿದಂತೆ ಒಟ್ಟು ರೂ. 6.5 ಲಕ್ಷ ಆದಾಯದವರೆಗೂ ತೆರಿಗೆ ಬರುವುದಿಲ್ಲ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.
ಕೃಪೆ: ಕನ್ನಡಪ್ರಭ
You must be logged in to post a comment.