
ಕ್ಯಾಲಿಫೋರ್ನಿಯಾ: ಮನೆ ಡೋರ್ ಬೆಲ್ ರಿಂಗ್ ಆಯ್ತು. ಮನೆಯೊಡತಿ ಯಾರಪ್ಪ ಅಂತಾ ನೋಡಿದ್ರೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಹಾಯ್ ಎಂದಿತ್ತು.
ಹೌದು, ಕ್ಯಾಲಿಫೋರ್ನಿಯಾದ ಕರೆನ್ ಅಲ್ಫಾನೋ ಎಂಬ ಮಹಿಳೆ ತಮ್ಮ ಮನೆಯ ಮುಂದೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಕಂಡಿ ದಂಗಾಗಿದ್ದಾರೆ.
ಕರೆನ್ ವಾಕಿಂಗ್ ಹೋದಾಗ ಮೊಸಳೆಯೊಂದು ಅವರ ಮನೆಯ ಆವರಣದಲ್ಲಿ ನುಗ್ಗಿದೆ. ಅಲ್ಲದೇ ಬಾಗಿಲ ಬಳಿ ಬಂದು ಡೋರ್ ಬೆಲ್ ಒತ್ತಿ ಸ್ವತಃ ತಾನೇ ಬಾಗಿಲು ತೆರೆಯಲು ಪ್ರಯತ್ನಿಸಿದೆ.
ಕೂಡಲೇ ಕರೆನ್ ಅರಣ್ಯ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ, ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
You must be logged in to post a comment.