ಕ್ಯಾಲಿಫೋರ್ನಿಯಾ: ಅಮೆರಿಕ ಬಾಸ್ಕೆಟ್‌ಬಾಲ್ ದಂತಕಥೆ ಕೋಬ್ ಬ್ರೆಯಾಂಟ್(41) ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಅಸುನೀಗಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ 41ರ ಹರೆಯದ ಕೋಬ್ ಬ್ರ್ಯಾಂಡ್ ಸಾವನ್ನಪ್ಪಿದ್ದಾರೆ. ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ಬೆಟ್ಟಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದ ಪರಿಣಾಮ ಅವಘಡ ಸಂಭವಿಸಿದೆ ಎಂಬುದು ತಿಳಿದು ಬಂದಿದೆ. ಇದೇ ದುರಂತದಲ್ಲಿ ಕೋಬ್ ಬ್ರ್ಯಾಂಟ್ ಮಗಳು 13ರ ಹರೆಯದ ಜಿಯನ್ನಾ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.
ಮಂಜಿನಿಂದ ಆವೃತ್ತವಾದ ಕೆಟ್ಟ ಹವಾಮಾನವೇ ದುರಂತಕ್ಕೆ ಕಾರಣವಾಗಿದೆ ಎಂಬುದು ತಿಳಿದು ಬಂದಿದೆ. ಕೋಬ್ ಬ್ರ್ಯಾಂಟ್ ನಿಧನಕ್ಕೆ ಕ್ರೀಡಾ ಲೋಕದ ಸೇರಿದಂತೆ ಅನೇಕ ಪ್ರಮುಖರು ಕಂಬನಿ ಮಿಡಿದಿದ್ದಾರೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಪ್ರಮುಖ ಶೋಕತಪ್ತ ಸಂದೇಶವನ್ನು ರವಾನಿಸಿದ್ದಾರೆ.
ಕೋಬ್ ಬ್ರೆಯಾಂಟ್ ಬಗ್ಗೆ ಒಂದಷ್ಟು ಮಾಹಿತಿ:
- ಆಗಸ್ಟ್ 23, 1978ರಲ್ಲಿ ಜನಿಸಿದ್ದ ಕೋಬ್ ಬ್ರೆಯಾಂಟ್ ಅಮೆರಿಕದ ವೃತ್ತಿಪರ ಬಾಕ್ಸೆಟ್ ಬಾಲ್ ಆಟಗಾರನಾಗಿ ಆಗಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು
- ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್(NBA) ಟೂರ್ನಿಯಲ್ಲಿ 20 ವರ್ಷಗಳ ಕಾಲ ಲಾಸ್ ಏಂಜಲೀಸ್ ತಂಡವನ್ನು ಪ್ರತಿನಿಧಿಸಿದ್ದರು.
- ಹೈಸ್ಕೂಲ್ ಓದುವಾಗಲೇ NBA ಟೂರ್ನಿಗೆ ನೇರ ಪ್ರವೇಶ ಪಡೆದಿದ್ದ ಕೋಬ್ ಬ್ರೆಯಾಂಟ್, 5 ಬಾರಿ NBA ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರು.
- 20 NBA ಆವೃತ್ತಿಗಳನ್ನಾಡಿದ ಕೋಬ್ ಬ್ರೆಯಾಂಟ್ ಸಾರ್ವಕಾಲಿಕ ಶ್ರೇಷ್ಠ ಬಾಸ್ಕೆಟ್‌ಬಾಲ್ ಆಟಗಾರ ಎನಿಸಿಕೊಂಡಿದ್ದರು.