ಆತ್ಮನಿರ್ಭರ ಭಾರತ: ಟಾಟಾ ಕಂಪೆಯಿಂದ 600 ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್

ನವದೆಹಲಿ: ಥೈಲ್ಯಾಂಡ್ ದೇಶ ಭಾರತೀಯ ಕಂಪನಿ ಟಾಟಾ ನಿರ್ಮಿಸಿದ 600 ಯುದ್ಧ ಟ್ರಕ್ ಗಳನ್ನು ತನ್ನ ಸೇನೆಗೆ ಸೇರಿಸಿಕೊಳ್ಳಲಿದೆ.

ಗೋ ಲೋಕಲ್ ಹೆಸರಿಗೆ ಅನ್ವರ್ಥವಾಗಿ 600 TATA LPTA ಖರೀದಿ ಮಾಡಲು ನಿರ್ಧರಿಸಿದ್ದನ್ನು ಥೈಲ್ಯಾಂಡ್ ರಾಯಭಾರಿ ಮಾಹಿತಿ ಹಂಚಿಕೊಂಡಿದ್ದಾರೆ.

ಟಾಟಾ ಕಂಪನಿಯ ಆರು ನೂರು ಟ್ರಕ್ ಖರೀದಿಗೆ ಮುಂದಾಗಿದೆ ಎಂದು ಚುಟಿನ್ ಟೊರ್ನ್ ಸಾಮ್ ಗೋಕ್ಸಾಡಿ ಟ್ವಿಟ್ ಮಾಡಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಎಂದು ಅಭಿಯಾನ ಆರಂಭಿಸಿದ್ದು ದೇಶದ ನಾಗರಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಈ ನಡುವೆ ಸ್ವದೇಶಿ ಟಾಟಾ ಕಂಪನಿಯ ಸಾಧನೆಗೆ ನೆಟ್ಟಿಗು ಪ್ರಶಂಸೆ ವ್ಯಕ್ತಪಡಿಸಿದ್ದು. ಹೀಗೆ ಭಾರತ ಪ್ರತಿಯೊಂದು ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಬೇಕೆಂದರೆ, ನಾವೆಲ್ಲರೂ ದೇಶಿ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು. ಆಗಲೇ ಆತ್ಮನಿರ್ಭರ ಭಾರತದ ಪರಿಕಲ್ಪನೆ ಸಾಧ್ಯ ಎಂದಿದ್ದಾರೆ.

Scroll to Top