ಭಾರತೀಯ ಅಮೆರಿಕನ್ನರೊಂದಿಗೆ ಟ್ರಂಪ್ ದೀಪಾವಳಿ ಆಚರಣೆ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಒವಲ್ ಕಚೇರಿಯಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಒಂದು ದಿನ ಮುಂಚಿತವಾಗಿ, ಟ್ರಂಪ್ ಓವಲ್ ಕಚೇರಿಯಲ್ಲಿ ದೀಪಾವಳಿಯನ್ನು ಭಾರತೀಯ-ಅಮೆರಿಕನ್ನರ ಸಣ್ಣ ಗುಂಪಿನೊಂದಿಗೆ ಆಚರಿಸಿದರು.

“ಅಮೆರಿಕಾದಾದ್ಯಂತ ದೀಪಾವಳಿಯನ್ನು ಆಚರಿಸುವುದು ನಮ್ಮ ರಾಷ್ಟ್ರದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುತ್ತದೆ” ಎಂದು ಟ್ರಂಪ್ ಹೇಳಿದರು.

“ದೀಪಾವಳಿ ಪ್ರಾರಂಭವಾಗುತ್ತಿದ್ದಂತೆ, ಮೆಲಾನಿಯಾ ಮತ್ತು ನಾನು ದೀಪಗಳ ಹಬ್ಬವನ್ನು ಆಚರಿಸುವವರಿಗೆ ಆಶೀರ್ವಾದ ಮತ್ತು ಸಂತೋಷದ ಆಚರಣೆಯನ್ನು ಬಯಸುತ್ತೇನೆ” ಎಂದು ಟ್ರಂಪ್ ಶ್ವೇತಭವನದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರಪಂಚದಾದ್ಯಂತದ ಅನೇಕ ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ, ಈ ಪವಿತ್ರ ಅವಧಿಯು ಕತ್ತಲೆಯಿಂದ ಬೆಳಕಿನೆಡೆಗೆ ವಿಜಯದ ಸಂಕೇಶವನ್ನು, ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ ಹಾಗೂ ಅಜ್ಞಾನದಿಂದ ಜ್ಞಾನದೆಡೆಗೆ ಎಂಬ ಸಂದೇಶವನ್ನು ಸ್ಮರಿಸುವ ಒಂದು ಅವಕಾಶವಾಗಿದೆ. ಈ ಪವಿತ್ರ ಸಮಯದುದ್ದಕ್ಕೂ ಸದಸ್ಯರು ಈ ನಂಬಿಕೆಗಳಲ್ಲಿ ಪ್ರಾರ್ಥನೆ ಮತ್ತು ದೀಪ ಬೆಳಗುವುದರಲ್ಲಿ ತೊಡಗುತ್ತಾರೆ. ಸಾಂಪ್ರದಾಯಿಕ ಹಬ್ಬಗಳು ಮತ್ತು ಇತರ ಹಬ್ಬಗಳಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪಾಲ್ಗೊಳ್ಳುತ್ತಾರೆ “ಎಂದು ಅವರು ಹೇಳಿದರು.

Scroll to Top