ನವದೆಹಲಿ: ವಿಶ್ವದ ಅತೀ ದೊಡ್ಡ ಮಳೆಕಾಡಾಗಿರುವ ಅಮೆಜಾನ್ ಅರಣ್ಯಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದೆ.
ಪ್ರಪಂಚದ 20% ಆಮ್ಲಜನಕವನ್ನು ಉತ್ಪಾದಿಸುವ ಅಮೆಜಾನ್ ಕಾಡುಗಳು ಕಳೆದ 18 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಕಾಡ್ಗಿಚ್ಚಿನ ಬೆಂಕಿಯ ತೀವ್ರತೆ ಎಷ್ಟಿದೆ ಅಂದ್ರೆ, ಬಾಹ್ಯಾಕಾಶದಿಂದಲೂ ದಟ್ಟ ಹೊಗೆ ಕಾಣಿಸುತ್ತಿದೆ.
ವಿಶ್ವದ ಅತೀ ದೊಡ್ಡ ಮಳೆಕಾಡಾಗಿರುವ ಅಮೆಜಾನ್, ಗ್ಲೋಬಲ್ ವಾರ್ಮಿಂಗನ್ನು ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಸುಮಾರು ಮೂರು ಕೋಟಿ ಸಸ್ಯ-ಪ್ರಾಣಿ ಪ್ರಬೇಧಗಳನ್ನು ತನ್ನ ಒಡಳೊಳಗೆ ಬಚ್ಚಿಟ್ಟುಕೊಂಡಿರುವ ಅಮೆಜಾನ್ ಅರಣ್ಯ, ಒಂದು ಮಿಲಿಯನ್ ಬುಡಕಟ್ಟು ಜನರಿಗೆ ಆಶ್ರಯ ನೀಡಿದೆ.