ಭಾರತಕ್ಕೆ ವಿಶ್ವಬ್ಯಾಂಕ್’ನಿಂದ 7600 ಕೋಟಿ ನೆರವು ಘೋಷಣೆ..!

ವಾಷಿಂಗ್ಟನ್: ಕೊರೊನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರು ಭಾರತಕ್ಕೆ ಒಂದು ಬಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು 7600 ಕೋಟಿ ರೂಪಾಯಿ) ಗಳಷ್ಟು ತುರ್ತು ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ (WB) ಸಮ್ಮತಿಸಿದೆ.

ದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಜೋರಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3000 ರ ಗಡಿ ದಾಟಿದ್ದು ಒಟ್ಟು 80ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಮಹಾಮಾರಿಯ ಹೊಡೆತಕ್ಕೆ ಭಾರತ ತತ್ತರಿಸಿ ಹೋಗುತ್ತಿದ್ದು, ಭಾರತದ ನೆರವಿಗೆ ವಿಶ್ವಬ್ಯಾಂಕ್ ಮುಂದಾಗಿದೆ.

ವಿಶ್ವಬ್ಯಾಂಕ್ ನೀಡಿರುವ ನೆರವಿನಿಂದ ಭಾರತದಲ್ಲಿ ಉತ್ತಮ ತಪಾಸಣೆ ವ್ಯವಸ್ಥೆ, ಸೋಂಕಿತರ ಶೋಧಕಾರ್ಯ, ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳ, ವೈದ್ಯಕೀಯ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ, ಸಾಧ-ಸಲಕರಣೆಗಳ ಪೂರೈಕೆ ಹಾಗೂ ಐಸೋಲೇಷನ್ ವಾರ್ಡ್‍ಗಳನ್ನು ಹೆಚ್ಚು ತೆರೆಯಲು ಸಹಾಯಕವಾಗಲಿದೆ.

ವಿಶ್ವ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ತುರ್ತು ಪರಿಹಾರ ನಿಧಿ ಯೋಜನೆಯಡಿಯಲ್ಲಿ 25 ರಾಷ್ಟ್ರಗಳ ನೆರವಿಗೆ ಮುಂದಾಗಿರುವುದಾಗಿ ವಿಶ್ವ ಬ್ಯಾಂಕ್‌ ತಿಳಿಸಿದೆ.

Scroll to Top