
ಪುಣೆ: ಕೊರೊನಾ ಮಹಾಮಾರಿ ಮಣಿಸಲು ದೇಶದಲ್ಲಿ ತಯಾರಾದ ಕೋವಿಶೀಲ್ಡ್ ಲಸಿಕೆಯ ವಿತರಣೆ ಕಾರ್ಯ ಜನವರಿ 16 ರಿಂದ ಆರಂಭವಾಗಲಿದೆ.
ಇದಕ್ಕೆ ಪೂರ್ವಭಾವಿಯಾಗಿ ಇಂದು ಕೋವಿಶೀಲ್ಡ್ ಲಸಿಕೆಯನ್ನು ದೇಶದ ಹಲವಾರು ನಗರಗಳಿಗೆ ವಿಮಾನ ಮತ್ತು ಟ್ರಕ್ ಮೂಲಕ ರವಾನಿಸಲಾಗುತ್ತಿದೆ.

ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನಿಂದ ಕೋವಿಡ್-19 ಲಸಿಕೆ ದೇಶದ ವಿವಿದೆಡೆಗೆ ಪೂರೈಕೆಯಾಗುತ್ತಿದೆ. ಬೆಂಗಳೂರು, ದೆಹಲಿ, ಚೆನ್ನೈ, ಕೋಲ್ಕತ್ತಾ, ಗುವಾಹಟಿ, ಶಿಲ್ಲಾಂಗ್, ಅಹಮದಾಬಾದ್, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಪಾಟ್ನಾ, ಲಖನೌ ಮತ್ತು ಚಂಡೀಗಢಕ್ಕೆ ಕೊರೊನಾ ಲಸಿಕೆ ತಲುಪಿಸಲಾಗುತ್ತಿದೆ.

ದೇಶದ 3 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ 56.5 ಲಕ್ಷ ಲಸಿಕೆಗಳನ್ನು ರವಾನಿಸಲಾಗುತ್ತಿದೆ.