ಬೆಂಗಳೂರು: ಕರ್ನಾಟಕದಲ್ಲಿ 33ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ. ರಾಜ್ಯದಲ್ಲಿ ಒಂದೇ ದಿನ 7 ಕೊರೊನಾ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಮಾರ್ಚ್ 21ರಂದು 5, ಮಾರ್ಚ್ 22ರಂದು 6 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದ್ರೆ, ಇವತ್ತು (ಮಾರ್ಚ್ 23) ಒಂದೇ ದಿನ ಹೊಸ 7 ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ಕರುನಾಡಲ್ಲಿ ಕೊರೋನಾ ಸೋಂಕಿತ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ, ಕೇರಳ ಬಳಿಕ ಕರ್ನಾಟಕಕ್ಕೆ 3ನೇ ಸ್ಥಾನಕ್ಕೇರಿದೆ.