
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಬಂಡೀಪುರದಲ್ಲಿ ಜೂನ್ 2ರಿಂದ ಸಫಾರಿ ಸ್ಥಳ ಬದಲಾವಣೆಯಾಗಲಿದೆ. ಅದಕ್ಕಾಗಿ ಬಂಡಿಪುರದಲ್ಲಿ ಸದ್ಯ ನಡೆಸಲಾಗುತ್ತಿರುವ ಸಫಾರಿಗೆ ನಿರ್ಬಂಧ ಹೇರಲಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ, ಇನ್ಮುಂದೆ ಬಂಡೀಪುರದ ಸಫಾರಿ ಬದಲು ಮೇಲುಕಾಮನಹಳ್ಳಿಯಲ್ಲಿ ಸಫಾರಿ ನಡೆಯಲಿದೆ.
ಮೇಲುಕಾಮನಹಳ್ಳಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸಮೀಪವೇ ಇದ್ದು, ಜೂನ್ 2ರಿಂದ ಈ ಮಾರ್ಗದಲ್ಲಿ ಸಫಾರಿ ನಡೆಸಬಹುದಾಗಿದೆ. ಸಫಾರಿ ನಡೆಯಲಿರುವ ಸ್ಥಳ ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್ ಆಗಿದೆ.
You must be logged in to post a comment.