ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕ ಬಸ್ನಲ್ಲಿಯೇ ಮಿನಿ ಉದ್ಯಾನವನ ಸೃಷ್ಟಿಸಿ ಪರಿಸರ ಪ್ರೇಮಿಗಳ ಗಮನ ಸೆಳೆದಿದ್ದಾರೆ.
ನಾರಾಯಣಪ್ಪ ಎಂಬುವವರೆ ಸಾರಿಗೆ ಸಂಸ್ಥೆಯ ಬಸ್ನಲ್ಲಿಯೇ ಮಿನಿ ಉದ್ಯಾನವನ ಸೃಷ್ಟಿಸಿದ ಚಾಲಕ. ಪರಿಸರದ ಮೇಲಿನ ಕಾಳಜಿಯಿಂದ ನಾರಾಯಣಪ್ಪ ಎಂಬ ಚಾಲಕ ಕಳೆದ 4 ವರ್ಷಗಳಿಂದ ಬಸ್ನಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಮಿನಿ ಗಾರ್ಡನ್ ಸೃಷ್ಟಿಮಾಡಿದ್ದಾರೆ.
ಕಾವಲ ಬೈರಸಂದ್ರ ಮತ್ತು ಯಶವಂತಪುರ ಮಾರ್ಗದಲ್ಲಿ ಚಲಿಸುವ ಬಸ್ನಲ್ಲಿ ಮಿನಿ ಗಾರ್ಡನ್ ಕಂಡ ಅನೇಕ ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ. ಪ್ರಯಾಣಿಕರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚಾಲಕ ಬಸ್ನಲ್ಲಿ ಗಿಡದ ಕುಂಡಗಳನ್ನು ಬೆಳೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಲಕ, ಜನರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 3-4 ವರ್ಷಗಳಿಂದ ಈ ರೀತಿಯ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಚಾಲಕನ ಪರಿಸರ ಜಾಗೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಯಾಣಿಕರು ಮಿನಿ ಗಾರ್ಡನ್ ಪೋಟೊಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿವೆ. ಮಾತ್ರವಲ್ಲ, ಪರಿಸರ ಪ್ರೇಮಿಗಳು ಚಾಲಕನ ಪರಿಸರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.