ಕನ್ನಡದ ಹಿರಿಯ ಹಾಸ್ಯನಟ “ಮಿಮಿಕ್ರಿ ರಾಜಗೋಪಾಲ್” ವಿಧಿವಶ

ಬೆಂಗಳೂರು: ಕಳೆದ 4 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಕಲಾವಿದ ಮಿಮಿಕ್ರಿ ರಾಜಗೋಪಾಲ್ ವಿಧಿವಶರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ನಿನ್ನೆ ರಾತ್ರಿ 1 ಗಂಟೆ ಸಮಯದಲ್ಲಿ ಕೆಂಗೇರಿಯಲ್ಲಿರುವ ತಮ್ಮ ನಿವಾಸದಲ್ಲಿ ರಾಜಗೋಪಾಲ್ ಅವರು ಕೊನೆಯುಸಿರೆಳೆದಿದ್ದಾರೆ. ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಜಗೋಪಾಲ್ ಅವರು ಕೆಂಗೇರಿ ಬಳಿ ಸರ್ಕಾರ ನಿರ್ಮಿಸಿದ್ದ ಬಿಡಿಎ ವಸತಿಗೃಹದಲ್ಲಿ ವಾಸವಾಗಿದ್ದರು.

ಮಿಮಿಕ್ರಿ ಮೂಲಕವೇ ಗುರುತಿಸಿಕೊಂಡಿದ್ದ ರಾಜಗೋಪಾಲ್ ಅಂಬರೀಷ್, ವಿಷ್ಣುವರ್ಧನ್, ಪ್ರಭಾಕರ್ ಸೇರಿದಂತೆ ಹಲವರ ಚಿತ್ರಗಳಲ್ಲಿ ನಟಿಸಿದ್ದ ಮಿಮಿಕ್ರಿ ರಾಜಗೋಪಾಲ್, ಸಾಯಿಪ್ರಕಾಶ್ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ, ಆರ್ಥಿಕವಾಗಿ ಪ್ರಬಲರಾಗಿ ಇರಲಿಲ್ಲ.

Scroll to Top