ವಿಶ್ವಾಸ ಮತ ಕಳೆದು ಕೊಂಡ ಮೈತ್ರಿ ಸರ್ಕಾರ: 14 ತಿಂಗಳ ಆಡಳಿತ ನೆಡೆಸಿದ ಸರ್ಕಾರ ಪತನ

ಬೆಂಗಳೂರು: 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ತೆರೆ ಬಿದ್ದಿದ್ದು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ 14 ತಿಂಗಳ ಸರಕಾರ ಪತನಗೊಂಡಿದೆ.

ಇಂದಿನ ವಿಶ್ವಾಸ ಮತಯಾಚನೆಯ ವೇಳೆ ಸರ್ಕಾರದ ಪರವಾಗಿ 99 ಮತಗಳು ಬಿದ್ದರೆ ವಿರುದ್ಧವಾಗಿ 105 ಮತಗಳು ಬಿದ್ದವು. ಈ ಮೂಲಕ ಸಿಎಂ ಸಲ್ಲಿಸಿದ್ದ ವಿಶ್ವಾಸ ಮತಯಾಚನೆ ಬಿದ್ದು ಹೋಗಿದೆ.

ವಿಶ್ವಾಸ ಮತಯಾಚನೆಯ ವೇಳೆ ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದರು. ಕಾಂಗ್ರೆಸ್ಸಿನ 14, ಜೆಡಿಎಸ್‍ನ 3 ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರ ಜೊತೆ ಬಿಎಸ್‍ಪಿಯ ಎನ್ ಮಹೇಶ್ ಗೈರಾಗಿದ್ದರು. ಇಂದು ದೋಸ್ತಿ ಪಕ್ಷದ ಒಟ್ಟು 99 ಶಾಸಕರು ಹಾಜರಾಗಿದ್ದರೆ ಬಿಜೆಪಿಯ 105 ಶಾಸಕರು ಹಾಜರಾಗಿದ್ದರು.

ವಿದಾಯ ಭಾಷಣದಲ್ಲೇ ಸಿಎಂ ಕುಮಾರಸ್ವಾಮಿ, ನಾನು ಇಲ್ಲಿಂದ ರಾಜ್ಯಪಾಲರ ಕಚೇರಿಗೆ ತೆರಳಿ ರಾಜೀನಾಮೆ ನೀಡೋದಿಲ್ಲ. ಮತಕ್ಕೆ ಹಾಕಿ, ನನಗೆ ಎಷ್ಟು ಮತ ಬೀಳುತ್ತೋ ನೋಡೋಣ ಅಂತಾ ಸ್ಪೀಕರ್​ ಬಳಿ ಹೇಳಿದ್ರು.

Leave a Comment

Scroll to Top