ಕೊಡಗು: ಕಾವೇರಿ ಜಲಾನಯನ ಪ್ರದೇಶ ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ, ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆ ಸುರಿಯುತ್ತಿದೆ.
ಕಳೆದ 24 ಗಂಟೆಗಳಲ್ಲಿ ಕೊಡಗಿನ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನವರಿಯಿಂದ ಈವರೆಗೆ ಕೊಡಗಿನಲ್ಲಿ 542 ಮೀಲಿ ಮೀಟರ್ ಮಳೆಯಾಗಿದೆ. ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಮಟ್ಟ ಹೆಚ್ಚುತ್ತಿದ್ದು ಭಕ್ತರಿಗೆ ಸಮಸ್ಯೆಯಾಗದಂತೆ ಕೊಡಗು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಮತ್ತೆ ಜಲಪ್ರಳಯದ ಭೀತಿಯಲ್ಲಿ ಕೊಡಗು ಜನತೆ
ಕಳೆದ ಬಾರಿ ಭೀಕರ ಮಳೆಗೆ ತುತ್ತಾಗಿದ್ದ ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.
ಜು.5ರಂದು ಸುರಿದ ಮಳೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯ ರಸ್ತೆ ಕುಸಿದಿದೆ. ಭಾಗಮಂಡಲದಲ್ಲಿ ಸುರಿದ ಮಳೆಯಿಂದಾಗಿ ಕಾವೇರಿಯಲ್ಲಿ ನೀರಿನ ಪ್ರಮಾಣ ಹೆಚ್ಚ ಬಹುದೆಂಬ ಸಂತಸದಲ್ಲಿದ್ದಾರೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆ ಆದರೆ ಕಳೆದ ಬಾರಿಯ ಕರಾಳತೆಯನ್ನು ಎದುರಿಸಿದ್ದವರಿಗೆ ಮಳೆ ಹೀಗೆಯೇ ಧಾರಾಕಾರವಾಗಿ ಮುಂದುವರೆದರೆ ಜಲಾವೃತಗೊಂಡು ಜನಸಂಪರ್ಕ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ರಸ್ತೆಯಲ್ಲಿ ಬಿರುಕು:
ಮಡಿಕೇರಿಯ ಸಂಪಿಗೆ ಕಟ್ಟೆ ಸಮೀಪ ಅಬ್ಬಿಫಾಲ್ಸ್ಗೆ ತೆರಳುವ ಮಾರ್ಗದಲ್ಲಿ ರಸ್ತೆ ಬಿರುಕು ಬಿಟ್ಟು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಇತ್ತೀಚೆಗೆ ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಗೆ ಮರಳು ತುಂಬಿದ ಚೀಲಗಳಿಂದ ತಡೆಗೋಡೆ ನಿರ್ವಿುಸಲಾಗಿತ್ತು. ಆದರೆ, ಶನಿವಾರ ರಸ್ತೆ ಬಿರುಕು ಬಿಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ರಸ್ತೆಯ ಒಂದು ಭಾಗದಲ್ಲಿ ಸಂಚಾರಕ್ಕೆ ಅನುಕೂಲ ಮಾಡಿರುವ ಪೊಲೀಸ್ ಇಲಾಖೆ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿದೆ.