ಬೆಂಗಳೂರು: ಹಿರಿಯ ನಟಿ ಕಿಶೋರಿ ಬಲ್ಲಾಳ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಿಶೋರಿ ಬಲ್ಲಾಳ್ ಚಿಕಿತ್ಸೆ ಫಲಕಾರಿಯಾಗದೇ ನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
‘ಇವಳೆಂತ ಹೆಂಡ್ತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಿಶೋರಿ ಬಲ್ಲಾಳ್ ಅವರು ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಹಿ, ಹನಿ ಹನಿ, ಸೂರ್ಯಕಾಂತಿ, ಅಕ್ಕತಂಗಿ, ನಮ್ಮಣ್ಣ, ಕೆಂಪೇಗೌಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಅಜ್ಜಿ, ತಾಯಿ ಪಾತ್ರದಲ್ಲಿ ನಟಿಸುತ್ತಿದ್ದು ಕಿಶೋರಿ ಬಲ್ಲಾಳ್ ಅವರು ಎಲ್ಲರ ಮನೆ ಮಾತಾಗಿದ್ದರು. ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಕಿಶೋರಿ ಬಲ್ಲಾಳ್ ತೆರೆಹಂಚಿಕೊಂಡಿದ್ದಾರೆ.