ಮಾರ್ಚ್ 31ರ ವರೆಗೂ ಮೈಸೂರು ಸೇರಿ ರಾಜ್ಯದ 9 ಜಿಲ್ಲೆಗಳು ಲಾಕ್ ಡೌನ್

helicopter-ride-in-mysuru-4

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರಕಾರ ಇಂದು ಒಂಬತ್ತು ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದೆ.

ಬೆಂಗಳೂರು ಸೇರಿದಂತೆ 9 ಜಿಲ್ಲೆಗಳನ್ನು ಮಾರ್ಚ್.31ರವರೆಗೂ ಲಾಕ್ ಡೌನ್ ಮಾಡುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಯಾವ ಜಿಲ್ಲೆಗಳು ಲಾಕ್ ಡೌನ್:

 1. ಬೆಂಗಳೂರು,
 2. ಬೆಂಗಳೂರು ಗ್ರಾಮಾಂತರ,
 3. ಬೆಳಗಾವಿ,
 4. ಕಲಬುರಗಿ,
 5. ಧಾರವಾಡ,
 6. ಚಿಕ್ಕಬಳ್ಳಾಪುರ,
 7. ಮೈಸೂರು,
 8. ಕೊಡಗು,
 9. ಮಂಗಳೂರು,

ಕರ್ನಾಟಕದಲ್ಲಿ ಕೊರೋನ ವೈರಾಣುವನ್ನು ನಿಗ್ರಹ ಮಾಡುವ ದೃಷ್ಟಿಯಿಂದ ಕೈಗೊಂಡಿರುವ ತುರ್ತು ನಿರ್ಧಾರಗಳು.

 • ರಾಜ್ಯದಲ್ಲಿ ನಾಳೆ ಕೂಡ ಸಾರ್ವಜನಿಕ ಸಾರಿಗೆ ಸೇವೆ ರದ್ದು; ಎಲ್ಲಾ ಎ.ಸಿ. ಬಸ್ಸುಗಳ ಸಂಚಾರ 31ನೇ ಮಾರ್ಚ್ 2020ರವರೆಗೆ ಸ್ಥಗಿತ.
 • ಇಂದು ರಾತ್ರಿ 9 ಗಂಟೆಯಿಂದ ನಾಳೆ 12 ಗಂಟೆಯವರೆಗೂ ಸೆಕ್ಷನ್ 144ನ್ನು ಜಾರಿ
 • ನಾಳೆಯಿಂದ ಮಾರ್ಚ್ 31ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು,ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ ಸೇರಿದಂತೆ ಕೋವಿಡ್-19 ಪ್ರಕರಣ ಕಂಡುಬಂದಿರುವ ಈ 9 ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಿಧಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗೆ ನಿರ್ಭಂಧ
 • ಈ 9 ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕೈಗಾರಿಕೆಗಳಲ್ಲಿ, ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರ ನಿಯೋಜನೆ
 • ಈ 9 ಜಿಲ್ಲೆಗಳಲ್ಲಿ ಅಂತರ್ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು 31ನೇ ಮಾರ್ಚ್ 2020ರವರೆಗೆ ಸ್ಥಗಿತ.
Scroll to Top