ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯನ ಜನುಮ ದಿನ ಇಂದು

ನಮ್ಮ ಹೆಮ್ಮೆಯ ಕನ್ನಡ ಧ್ವಜದ ವಿನ್ಯಾಸವನ್ನು ರೂಪಿಸಿದ ಮ.ರಾಮಮೂರ್ತಿ ಅವರ ಜನುಮ ದಿನ ಇಂದು. ಮ. ರಾಮಮೂರ್ತಿ ಅವರು ಕನ್ನಡ ಬಾವುಟವನ್ನು ಮಾತ್ರ ವಿನ್ಯಾಸಗೊಳಿಸಿದ್ದಲ್ಲ, ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು.

ಕನ್ನಡ ಸೇನಾನಿ ಮ. ರಾಮಮೂರ್ತಿಯವರು ಹುಟ್ಟಿದ್ದು ಮಾರ್ಚ್ ಹನ್ನೊಂದು, ಹತ್ತೋಂಬತ್ತನೂರಾ ಹದಿನೆಂಟರಂದು, ನಂಜನಗೂಡಿನಲ್ಲಿ. ತಂದೆ ಸುಪ್ರಸಿದ್ಧ ಪತ್ರಕರ್ತರೂ, ಶ್ರೇಷ್ಠ ಸಾಹಿತಿಗಳೂ ಆದ ವೀರಕೇಸರಿ ಶ್ರೀ ಸೀತಾರಾಮ ಶಾಸ್ತ್ರಿಗಳು, ತಾಯಿ ಪರಮಸಾತ್ವಿಕರಾದ ಶ್ರೀಮತಿ ಸುಬ್ಬಮ್ಮನವರು.

ಮ. ರಾಮಮೂರ್ತಿ ಅವರು

ರಾಮಮೂರ್ತಿಗಳು ಕವಿಗಳು, ಸಾಹಿತಿಗಳು ಅಲ್ಲದೇ ಪತ್ರಕರ್ತರೂ ಆಗಿದ್ದರು. ನೂರೈವತ್ತಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿರುವ ಅವರು ನಮ್ಮ ಅರಿಷಿಣ-ಕುಂಕುಮ (ಹಳದಿ-ಕೆಂಪು) ಕನ್ನಡ ಬಾವುಟದ ಕರ್ತೃಗಳೂ ಕೂಡ ಹೌದು.

ಅರವತ್ತರ ದಶಕದಲ್ಲಿ ಕನ್ನಡಕ್ಕಾಗುತ್ತಿದ್ದ ಅನ್ಯಾಯದ ವಿರುದ್ಧ ಬಂಡೆದ್ದ ರಾಮಮೂರ್ತಿಗಳು, ಅನಕೃರವರ ಅಧ್ಯಕ್ಷತೆಯಲ್ಲಿ ಆರಂಭವಾದ ಕರ್ನಾಟಕ ಸಂಯುಕ್ತರಂಗದ ಮೂಲಕ ಕನ್ನಡಿಗರನ್ನು ಒಂದು ಗೂಡಿಸಿ ಕನ್ನಡ ಚಳುವಳಿಗೆ ನಾಂದಿ ಹಾಡಿದ್ದರು.

Leave a Comment

Scroll to Top