ರಾಜ್ಯದಲ್ಲಿ ಇಂದು 135 ಕೊರೋನಾ ಪಾಸಿಟೀವ್ ಕೇಸ್ ಪತ್ತೆ: ಮೂವರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 135 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆ ಆಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿದೆ.

ಇನ್ನು ರಾಜ್ಯದಲ್ಲಿ ಇಂದು ಕೊರೊನಾಗೆ ಮೂವರು ಮೃತಪಟ್ಟಿದ್ದಾರೆ. ವಿಜಯಪುರದಲ್ಲಿ ಸಕ್ಕರೆ ಖಾಯಿಲೆ, ಶ್ವಾಸಕೋಶ ಸಮಸ್ಯೆ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ P-1011, ಯಾದಗಿರಿಯಲ್ಲಿ 69 ವರ್ಷದ ಮಹಿಳೆ P-2301, ಬೀದರ್​ನಲ್ಲಿ ಉಸಿರಾಟದ ಸಮಸ್ಯೆ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ P-1712 ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?

 1. ಕಲಬುರ್ಗಿ 28,
 2. ಯಾದಗಿರಿ 16,
 3. ಹಾಸನ 15,
 4. ಬೀದರ್ 14,
 5. ದಕ್ಷಿಣ ಕನ್ನಡ 11,
 6. ಉಡುಪಿ 9,
 7. ಉತ್ತರ ಕನ್ನಡ 6,
 8. ಬೆಂಗಳೂರು ನಗರ 6,
 9. ದಾವಣಗೆರೆ 6,
 10. ರಾಯಚೂರು 5,
 11. ಬೆಳಗಾವಿ 4,
 12. ಚಿಕ್ಕಮಗಳೂರು 3,
 13. ಬೆಂಗಳೂರು ಗ್ರಾಮಾಂತರ 2,
 14. ವಿಜಯಪುರ 3,
 15. ಚಿಕ್ಕಬಳ್ಳಾಪುರ 4,
 16. ಮಂಡ್ಯ 1,
 17. ಕೊಲಾರ 1
 18. ತುಮಕೂರಿನಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ.

ನಿನ್ನೆ ಸಂಜೆಯಿಂದ ಈವರೆಗೆ ರಾಜ್ಯದಲ್ಲಿ 135 ಹೊಸ ಕೊರೊನಾ ಸೋಂಕಿತರ ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 2418ಕ್ಕೆ ಏರಿಕೆ ಆಗಿದೆ. ಈವರೆಗೆ ಸೋಂಕಿನಿಂದ 47 ಜನ ಮೃತಪಟ್ಟಿದ್ದು, 781 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 1588 ಸಕ್ರೀಯ ಪ್ರಕರಣಗಳು ಇವೆ.

Scroll to Top