ಬೆಂಗಳೂರು: ರಾಜ್ಯದಲ್ಲಿ ಇಂದು 388 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3796ಕ್ಕೆ ಏರಿಕೆ ಆಗಿದೆ. 150 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?
- ಉಡುಪಿ 150
- ಕಲಬುರ್ಗಿ 100
- ಬೆಳಗಾವಿ 51
- ರಾಯಚುರು 16
- ಬೆಂಗಳೂರು ನಗರ 12
- ಬೀದರ್ 10
- ಬಾಗಲಕೊಟೆ 9
- ದಾವಣಗೆರೆ 7
- ಹಾಸನ 9
- ಯಾದಗಿರಿ 5
- ಮಂಡ್ಯ 4
- ಚಿಕ್ಕಬಳ್ಳಾಪುರ 2
- ವಿಜಯಪುರ 4
- ಧಾರವಾಡ 2
- ತುಮಕುರು 2
- ಬೆಂಗಳೂರು ಗ್ರಾಮಾಂತರ 3
- ಹಾವೇರಿ 1
- ಕೊಲಾರ 1
388 ಪ್ರಕರಣಗಳಲ್ಲಿ 363 ಮಂದಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹಿಂದಿರುಗಿದವರಾಗಿದ್ದಾರೆ. ಇಂದು 75 ಜನ ಸೋಂಕಿತರು ಗುಣಮುಖರಾಗಿದ್ದಾರೆ.
ನಿನ್ನೆ ಸಂಜೆಯಿಂದ ಈವರೆಗೆ ರಾಜ್ಯದಲ್ಲಿ 388 ಹೊಸ ಕೊರೊನಾ ಸೋಂಕಿತರ ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 3796ಕ್ಕೆ ಏರಿಕೆ ಆಗಿದೆ. ಈವರೆಗೆ ಸೋಂಕಿನಿಂದ 52 ಜನ ಮೃತಪಟ್ಟಿದ್ದು, 1403 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 2339 ಸಕ್ರೀಯ ಪ್ರಕರಣಗಳು ಇವೆ.