ಇದು ಕುಚೇಲ ಕುಬೇರನಾಗಿರುವ ಕಥೆ… ಅಂದು ದೇವಸ್ಥಾನದಲ್ಲಿ ವಾರಾನ್ನ ತಿಂದುಕೊಂಡು ಬೆಳೆದ ಹುಡುಗ ಬದುಕಿನ ಬಂಡಿ ತಳ್ಳಲು ಬೆಂಗಳೂರಿಗೆ 14 ರ ವಯಸ್ಸಿನಲ್ಲೇ ಹೋದ ಹುಡುಗ…ಆಫೀಸ್ ಬಾಯ್ ಆಗಿದ್ದ ಹುಡುಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಬೆಳೆದ.
ಬಜಾಜ್ ಸ್ಕೂಟರ್ ಹೊಂದಿದ್ದವ, ನಂತರ ಮಾರುತಿ 800 ಕಾರಿನಲ್ಲಿ ಬದುಕಿನ ಪಯಣ ಆರಂಭಿಸಿದ. ನಂತರ ಕಾರುಗಳ ಕ್ರೇಜ್ ಬೆಳೆಸಿಕೊಂಡ ಹುಡುಗ ಈಗ ಇಟಲಿಯಲ್ಲಿ ಉತ್ಪಾದನೆಯಾಗುವ ವಿಶ್ವದ ಅತ್ಯಾಧುನಿಕ ಮತ್ತು ಅತೀ ಹೆಚ್ಚು ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮಾಲೀಕ. ದಕ್ಷಿಣ ಭಾರತಕ್ಕೆ ಲ್ಯಾಂಬೋರ್ಗಿನಿ ಕಾರಿನ ಡಿಸ್ಟ್ರಿಬ್ಯೂಟರ್ ಆಗಿ ಬೆಳೆದಿರುವ ಯಶೋಗಾಥೆಯ ಕಥೆ ಇದು.
ಮಾಗಡಿಯ ತಿರುಮಲೆಯ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಟ್ರಕ್‍ನಲ್ಲಿದ್ದ ಪರದೆ ಮುಚ್ಚಿದ್ದ ಕಾರನ್ನ ನೋಡಲು ಜನವೋ ಜನ. ಕಾರನ್ನ ಟ್ರಕ್‍ನಿಂದ ಇಳಿಸಿದಾಕ್ಷಣ ಎಲ್ಲರಿಗೂ ಆಶ್ಚರ್ಯ. ಎಂದೂ ನೋಡಿರದ ಕಾರು ನಮ್ಮೂರಿಗೆ ಬಂದಿದೆ. ಸ್ಪೋರ್ಟ್ಸ್ ಟ್ರ್ಯಾಕ್‍ನಲ್ಲಿ ಓಡಬೇಕಾದ ಕಾರು ತಿರುಮಲೆ ರಸ್ತೆಯಲ್ಲಿ ಓಡುತ್ತಿದ್ದುದನ್ನ ನೋಡಿದ ಜನಕ್ಕೆ ಏನೋ ಒಂಥರಾ ಖುಷಿ. ನಾನೊಂದು ರೌಂಡ್ ನಾನೊಂದು ರೌಂಡ್ ಎಂದು ಕಾರಿನಲ್ಲಿ ಕುಳಿತು ರೌಂಡ್ಸ್ ಹೊಡೆಯುತ್ತಿದ್ದುದು ಇನ್ನೂ ವಿಶೇಷವಾಗಿತ್ತು.
ಇಷ್ಟಕ್ಕೆಲ್ಲಾ ಕಾರಣ ತಿರುಮಲೆಯ ಬಡಬ್ರಾಹ್ಮಣ ರಂಗಾಚಾರ್ ಎಂಬುವವರ ಪುತ್ರ ಸತೀಶ್. ಮೊದಲಿನಿಂದಲೂ ಬಡತನದಲ್ಲೇ ಬೆಳೆದ ಸತೀಶ, ಬಾಲ್ಯದಲ್ಲಿ ತಾನು ಅನುಭವಿಸಿದ ಬಡತನವನ್ನೆ ಮೆಟ್ಟಿಲನ್ನಾಗಿಸಿಕೊಂಡು ಬಂದ ದಾರಿಯನ್ನೇ ಮರೆಯದೇ ಯಶಸ್ಸಿನ ಹಾದಿಯಲ್ಲಿ ಸಾಗಿದ ವ್ಯಕ್ತಿ. ಮೊದಲಿಗೆ ಕಂಪ್ಯೂಟರ್ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡರು. ನಂತರ ಹಂತಹಂತವಾಗಿ ಬೆಳೆದ ಸತೀಶ್ ಹೀನಾ ಎಂಬ ಯುವತಿಯನ್ನ ಮದುವೆಯಾದರು. ಸತೀಶ್ ಯಶೋಗಾಥೆ ಮುಂದೆ ಓದಿ…
ಬೆಳೆದಿದ್ದು ಹೀಗೆ
ಮದುವೆಯಾದ ನಂತರ ಅಪಾರ್ಟ್ ಮೆಂಟ್ ಗಳನ್ನ ಕಟ್ಟುವ ಕಾಯಕಕ್ಕೆ ಇಳಿದರು. ಹೊಯ್ಸಳ ಕನ್ ಸ್ಟ್ರಕ್ಷನ್ಸ್ ಎಂಬ ಹೆಸರಿನಲ್ಲಿ ಕಂಪನಿ ಆರಂಭಿಸಿದ ಸತೀಶ್, ಯಶಸ್ಸಿನ ಹಾದಿಯಲ್ಲಿ ಎಡವಿದ್ದೇ ಇಲ್ಲ.
ತನ್ನೆಲ್ಲಾ ಯಶಸ್ಸಿಗೆ ಮಾಗಡಿ ತಿರುಮಲೆ ರಂಗನೇ ಕಾರಣವೆಂದು ತಿಳಿದ ಸತೀಶ್ ಮೊದಲಿಗೆ ಉತ್ಸವ ಮೂರ್ತಿಗೆ ಸುಮಾರು 60 ಲಕ್ಷ ವೆಚ್ಚದ ಚಿನ್ನದ ಕಿರೀಟವನ್ನ ತೊಡಿಸಿದರು. ನಂತರ ಮೂಲದೇವರಿಗೆ ವಜ್ರಖಚಿತ ಕಿರೀಟವನ್ನ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ತೊಡಿಸಿದರು. ನಂತರ ತಾನು ಹುಟ್ಟಿದ ಊರಿನಲ್ಲಿ ಅನೇಕ ಸಮಾಜ ಮುಖಿಯಾದ ಕಾರ್ಯವನ್ನ ಮಾಡಿದರು.
1989ರಲ್ಲಿ ಮಾರುತಿ 800 ಕಾರಿನಲ್ಲಿ ಓಡಾಡುತ್ತಿದ್ದ ಸತೀಶ್, ಬೆಂಗಳೂರಿನ ಹಲವೆಡೆಗಳಲ್ಲಿ ಅಪಾರ್ಟ್ ಮೆಂಟ್ ಗಳನ್ನ ನಿರ್ಮಾಣ ಮಾಡಿ ಮಾಲೀಕರಾದರು. ನಂತರ ಬೆಂಜ್, ಮರ್ಸಿಡೆಸ್,. ವೋಕ್ಸ್ ವೋಗನ್ ಸೇರಿದಂತೆ ಹಲವು ಕಂಪೆನಿಗಳ ಕಾರಿನ ಮಾಲೀಕರಾದರು.
ಕಾರುಗಳ ಬಗ್ಗೆ ಕ್ರೇಜ್
ಕಾರುಗಳ ಬಗ್ಗೆ ವಿಶೇಷವಾದ ಕ್ರೇಜ್ ಬೆಳೆಸಿಕೊಂಡ ಸತೀಶ್, ಎಲ್ಲಾ ರೀತಿಯ ಐಷಾರಾಮಿ ಕಾರುಗಳ ಒಡೆಯರಾದರು. ಅತ್ಯಾಧುನಿಕ ಕ್ರೀಡಾ ಕಾರು ಲ್ಯಾಂಬೋರ್ಗಿನಿ ಕೊಳ್ಳಲು ದೆಹಲಿ ಮತ್ತು ಮುಂಬೈ ಷೋರೂಂಗಳಿಂದ ಖರೀದಿ ಮಾಡಬೇಕಾಗಿತ್ತು.
ದಕ್ಷಿಣ ಭಾರತದಲ್ಲಿ ಲ್ಯಾಂಬೋರ್ಗಿನಿ ಕಾರಿನ ಡೀಲರ್ ಶಿಪ್ ಯಾರ ಬಳಿಯೂ ಇರಲಿಲ್ಲ. ಲ್ಯಾಂಬೋರ್ಗಿನಿ ಕಾರಿನ ಡೀಲರ್ ಶಿಪ್ ನ್ನ ದಕ್ಷಿಣ ಭಾರತಕ್ಕೆ ಪಡೆದುಕೊಂಡರು. ಬೆಂಗಳೂರಿನ ಕಸ್ತೂ ಬಾ ರಸ್ತೆ ಮತ್ತು ಕೇರಳದ ಕೊಚ್ಚಿ ಮತ್ತಿತರೆಡೆಗಳಲ್ಲಿ ಲ್ಯಾಂಬೋರ್ಗಿನಿ ಷೋರೂಂ ತೆರೆಯಲು ಸತೀಶ್ ಎಲ್ಲಾ ಸಿದ್ಧತೆಗಳನ್ನ ನಡೆಸಿದ್ದಾರೆ.
ಈ ನಡುವೆ ಲ್ಯಾಂಬೋರ್ಗಿನಿ ಕಾರಿನ ಮಾಡೆಲ್ ಆಗಿರುವ ಅವೆಂಟಾಡಾರ್ ರೋಡ್ ಸ್ಟರ್ ಹೆಸರಿನ ಸ್ಪೋಟ್ರ್ಸ್ ಕಾರನ್ನ ಸತೀಶ್ ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆಯೇ ಸುಮಾರು 7.70 ವೆಚ್ಚ. ಇಡೀ ಭಾರತದಲ್ಲಿ ಈ ಮಾಡೆಲ್ ಕಾರಿನ 2ನೇ ಒಡೆಯರಾಗಿದ್ದಾರೆ.
ಸಾಧನೆಗೆ ಮಾಗಡಿ ಜನ ಸಂತಸ
ಈ ಕಾರು ಸಾಮಾನ್ಯ ಹಳ್ಳಿ ನಗರದ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಹಂಪ್ಸ್ ಗಳನ್ನ ಹತ್ತಿ ಓಡುವ ಕಾರು ಇದಾಗಿಲ್ಲ. ಈ ಕಾರನ್ನ ಕ್ರೇಜ್‍ಗಾಗಿ ಹಣವಂತರು ಒಡೆಯರಾಗುತ್ತಾರೆ. ಕೇವಲ ಮೂರು ಕಿಲೋಮೀಟರ್ ಮೈಲೇಜ್‍ನ್ನ ಹೊಂದಿದೆ.
ಲ್ಯಾಂಬೋರ್ಗಿನಿ ಕಂಪೆನಿ ಒಂದು ಮಾಡೆಲ್ ನ ಕಾರನ್ನ ಒಂದು ದೇಶಕ್ಕೆ ನೀಡಿದರೆ ಅದೇ ಮಾಡೆಲ್ ನ ಕಾರು ಬೇರೆ ವ್ಯಕ್ತಿಗೆ ಮಾರಾಟ ಮಾಡಬೇಕಾದರೆ 22 ತಿಂಗಳು ಬೇಕಾಗುತ್ತದೆ. ಈ ಕಾರು ಲಿಮಿಟೆಡ್ ಎಡಿಷನ್ ಕಾರಾಗಿದೆ.
ಸತೀಶ್ ಕಾರನ್ನ ಪಡೆದು ತನ್ನ ಮನೆದೇವರು ತಿರುಮಲೆ ರಂಗನ ಬಳಿ ಪೂಜೆ ಮಾಡಿಸಿ ನಂತರ ಕಾರನ್ನ ಚಲಾಯಿಸಿದ್ದಾರೆ. ತನ್ನ ಸಂಬಂಧಿಕರು, ಸ್ನೇಹಿತರನ್ನ ಈ ಕೋಟ್ಯಾಂತರ ರೂಪಾಯಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಜಾಲಿ ರೈಡ್ ಮಾಡಿದ್ದಾರೆ. ತಿರುಮಲೆ ಗ್ರಾಮದ ಮಂದಿ ಕೂಡ ನಮ್ಮೂರಿನ ಹುಡುಗ ವಿಶ್ವದ ಪ್ರಖ್ಯಾತ ಕಾರಿನ ಮಾಲೀಕನಾಗುವುದರೊಂದಿಗೆ ಡಿಸ್ಟ್ರಿಬ್ಯೂಟರ್ ಕೂಡ ಆಗಿದ್ದಾನೆಂದು ಖುಷಿ ಪಡುತ್ತಿದ್ದಾರೆ.
ಲ್ಯಾಂಬೋರ್ಗಿನಿ ಬಗ್ಗೆ
ಇತ್ತೀಚೆಗೆ 50 ವಾರ್ಷಿಕೋತ್ಸವ ಆಚರಿಸಿಕೊಂಡಿರುವ ಇಟಲಿ ಮೂಲದ ಕ್ರೀಡಾ ಕಾರುಗಳ ಸಂಸ್ಥೆ ಬಗ್ಗೆ ರೇಸ್ ಪ್ರಿಯರಿಗೆ ಗೊತ್ತೇ ಇರುತ್ತದೆ. ಸತೀಶ್ ಅವರ ಕಾರು ವಿ-12 ಇಂಜಿನ್ ಹೊಂದಿದೆ.ಸೆ ವನ್ ಹಂಡ್ರೆಡ್ ಹಾರ್ಸ್ ಪವರ್ ಸಾಮರ್ಥ್ಯ. 350 ಕಿಲೋಮಿಟರ್ ಈ ಕಾರಿನ ಟಾಪ್ ಸ್ಪೀಡ್
- ಕಾರಿನ ಬಾಡಿ ಪೂರಾ ತುಂಬಾ ಶಕ್ತಿ ಶಾಲಿ ವಸ್ತುವಾಗಿರುವ ಕಾರ್ಬನ್ ಫೈಬರ್ ನಿಂದ ಕೂಡಿದೆ
- ಜೀರೋ ಟು ಹಂಡ್ರೆಂಡ್ ಕಿಲೋಮೀಟರ್ ವೇಗವನ್ನ 2.9 ಸೆಕಂಡ್ಸ್ ಗಳಲ್ಲಿ ವೇಗ ತಲುಪುತ್ತದೆ
- ಟೂ ಸೀಟರ್ ವಾಹನವಾಗಿದ್ದು ಡೋರ್ ಹಕ್ಕಿಯ ರೆಕ್ಕೆಗಳಂತೆ ತೆರದುಕೊಳ್ಳುತ್ತದೆ.
- ಗೇರ್ ಇಲ್ಲದೇ ಎಕ್ಸಲೇಟರ್ ನ್ನ ಹೊಂದಿದೆ. ಜತೆಗೆ ಅತ್ಯಾಧುನಿಕ ಫೀಚರ್ಸ್‍ಗಳ್ನನ ಈ ಸ್ಪೋಟ್ರ್ಸ್ ಕಾರು ಹೊಂದಿದೆ.
- ಈ ಕಾರು ಪೆಟ್ರೋಲ್ ನಿಂದ ಚಲಿಸುತ್ತದೆ.
- ಒಂದು ಲೀಟರ್ ಪೆಟ್ರೋಲ್ಗೆ 3 ಕಿಲೋಮೀಟರ್ ಪ್ರಯಾಣಿಸಬಹುದು.
Source: Oneindia Kannada