ಗುಂಡಿಬಿದ್ದ ರಸ್ತೆಯಲ್ಲಿ ಚಂದ್ರಯಾನ ಮಾಡಿಸಿ ಬಿಬಿಎಂಪಿ ಕಣ್ತೆರೆಸಿದ ಮೈಸೂರಿನ ಕಲಾವಿದ

ಬೆಂಗಳೂರು: ಮೈಸೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿ ಬೆಂಗಳೂರಿನ ಹಳ್ಳಬಿದ್ದ ರಸ್ತೆಗಳ ಗುಂಡಿಗಳನ್ನು BBMP ಗಮನಕ್ಕೆ ತರಲು ಬಳಸಿದ ಐಡಿಯಾ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ನಗರದ ಹೇರೋಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಬಿದ್ದು ಆಳಾಗಿದ್ದನ್ನು ಗಮನಿಸಿದ ಮೈಸೂರು ಮೂಲದ ಬಾದಲ್ ನಂಜುಂಡಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆಯ ಗಮನ ಸೆಳೆಯಲು ನಟ ಪೂರ್ಣಚಂದ್ರ ಅವರಿಗೆ ಗಗನಯಾತ್ರಿಯ ವೇಷ ಧರಿಸಿ ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ನಡೆದಾಡುವಂತೆಯೇ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆದಾಡಿಸಿದ್ದಾರೆ. ನಂತರ ಈ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.

ಎಚ್ಚೆತ್ತುಕೊಂಡ ಬಿಬಿಎಂಪಿ:

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಿದೆ. ದುರಸ್ತಿ ಕಾಮಗಾರಿಯ ವಿಡಿಯೊವನ್ನೂ ಪೋಸ್ಟ್ ಮಾಡಿರುವ ನಂಜುಂಡಸ್ವಾಮಿ ಅವರು, ‘ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆಗಳು. ಕಾಮಗಾರಿ ಪ್ರಗತಿಯಲ್ಲಿದೆ. ಬಿಬಿಂಎಪಿ ತ್ವರಿತವಾಗಿ ಸ್ಪಂದಿಸಿದೆ. ಬಿಬಿಎಂಪಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

Scroll to Top