ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ

ಬೆಂಗಳೂರು: ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಕದ್ರಿ ಗೋಪಾಲನಾಥ್ ರವರು ನಿಧನರಾಗಿದ್ದಾರೆ.

ಗೋಪಾಲನಾಥ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಸ್ಯಾಕ್ಸೊಪೋನ್ ವಾದನದಲ್ಲಿ ಕರ್ನಾಟಕ ಸಂಗೀತ ಅಳವಡಿಸಿಕೊಂಡು ವಿಶ್ವಪ್ರಸಿದ್ದಿ ಪಡೆದವರಾಗಿದ್ದರು.

ಡಿಸೆಂಬರ್ 11, 1949ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡದಲ್ಲಿ ಜನಿಸಿದ ಗೋಪಾಲನಾಥ್ ಜಗತ್ತಿನಾದ್ಯಂತ ಸಾವಿರಾರು ಸಂಗೀತ ಕಚೇರಿ ನೀಡಿದ್ದಾರೆ. ಪದ್ಮಶ್ರೀ, ಸ್ಯಾಕ್ಸೊಫೋನ್ ಚಕ್ರವರ್ತಿ ಸೇರಿ ನೂರಾರು ಗೌರವ, ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಅವರ ತಂದೆ ತನಿಯಪ್ಪ ಅವರೂ ಪ್ರಸಿದ್ಧ ನಾದಸ್ವರ ವಾದಕರಾಗಿದ್ದರು.

ಮೈಸೂರು ಅರಮನೆಯ ಬ್ಯಾಂಡ್‌ ಸೆಟ್‌ನಲ್ಲಿ ಸ್ಯಾಕ್ಸೊಫೋನ್ ನೋಡಿ ಪ್ರಭಾವಿತರಾಗಿದ್ದ ಅವರು ಸ್ಯಾಕ್ಸೊಫೋನ್ ಕಲಿಯಲು ನಿರ್ಧರಿಸಿದ್ದರು. ಅಲ್ಲಿಂದ ಆರಂಭಿಸಿ 20 ವರ್ಷಗಳ ಕಠಿಣ ಅಭ್ಯಾಸದಿಂದ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರಾಗಿ ಹೊರಹೊಮ್ಮಿದರು. ಖ್ಯಾತ ಸಂಗೀತ ನಿರ್ದೇಶಕರಾಗಿರುವ ಮಣಿಕಾಂತ್ ಕದ್ರಿ ಗೋಪಾಲ್‌ನಾಥ್ ಅವರ ಪುತ್ರ.

Scroll to Top