
ಬೆಂಗಳೂರು: ಇದೇ ಜೂನ್ 14ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಧಾನಸೌಧದಲ್ಲಿಂದು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.14ರಂದು ಪ್ರಥಮ ಭಾಷೆ ಕನ್ನಡ, 16ರಂದು ಗಣಿತ, ಸಮಾಜಶಾಸ್ತ್ರ, 18ರಂದು ಇಂಗ್ಲಿಷ್ ಅಥವಾ ಕನ್ನಡ, 21ರಂದು ವಿಜ್ಞಾನ, 23ರಂದು ತೃತಿಯ ಭಾಷೆ ಹಿಂದಿ, 25ರಂದು ಸಮಾಜ ವಿಜ್ಞಾನ, ಪರೀಕ್ಷೆ ನಡೆಯಲಿದೆ.
ಪ್ರಥಮ ಭಾಷೆಯ ಪರೀಕ್ಷೆ 3.15 ಗಂಟೆ ಹಾಗೂ ಇನ್ನುಳಿದ ವಿಷಯಗಳಿಗೆ 3 ಗಂಟೆಗೆ ಕಾಲಾವಕಾಶ ಇರಲಿದೆ ಎಂದು ತಿಳಿಸಿದ್ದಾರೆ.
ಇದು ಕೇವಲ ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಪರೀಕ್ಷೆ ವೇಳಾಪಟ್ಟಿ ಕುರಿತು ಆಕ್ಷೇಪ ಸಲ್ಲಿಸಲು ಫೇ.26ರ ವರೆಗೆ ಅವಕಾಶವಿದೆ ಎಂದು ಸಚಿವರು ತಿಳಿಸಿದ್ದಾರೆ.
You must be logged in to post a comment.