ಅಂತರ್ ಜಿಲ್ಲಾ ಪ್ರಯಾಣಕ್ಕೆ ಒನ್ ವೇ ಬದಲಿಗೆ ಟೂವೇ ಪಾಸ್

ಬೆಂಗಳೂರು: ಲಾಕ್ ಡೌನ್ ಜಾರಿಯಾದ ನಂತರ ಊರಿಗೆ ಹೋಗಲು ಸಾಧ್ಯವಾಗದೆ ಇರುವವರಿಗೆ ಒಮ್ಮೆ ಊರಿಗೆ ಹೋಗಿ ಬರಲು ಅವಕಾಶ ಕಲ್ಪಿಸಲಾಗಿದೆ. ಒನ್ ವೇ ಪಾಸ್ ಅನ್ನು ಟು ವೇ ಪಾಸ್ ಆಗಿ ಪರಿಷ್ಕರಿಸಿದ್ದು, ಒಂದು ಸಲ ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಬರಲು ಅನುಕೂಲ ಕಲ್ಪಿಸಲಾಗಿದೆ

ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೆ ಕೆಲ ನಿಯಮಗಳು ಬದಲಾವಣೆಯಾಗಿದೆ. ಆರಂಭದಲ್ಲಿ ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಒನ್ ವೇ ಪಾಸ್ ನೀಡಲಾಗಿತ್ತು. ಇದೀಗ ಟೋವೇ ಪಾಸ್ ಜಾರಿ ಮಾಡಲಾಗಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಹೊಸ ಆದೇಶ ಹೊರಡಡಿಸಿದ್ದಾರೆ.

ಈ ಹಿಂದೆ ಒನ್ ಟೈಮ್ ಒನ್ ವೇ ಪಾಸ್ ಜಾರಿ ಮಾಡಲಾಗಿತ್ತು. ಈ ಪಾಸ್ ಬಳಸಿ ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಒನ್ ವೇ ಬದಲಿಗೆ ಒನ್ ಟೈಮ್ ಟೂವೇ ಪಾಸ್ ನೀಡುವಂತೆ ಆದೇಶ ಜಾರಿ ಮಾಡಲಾಗಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ತುರ್ತು ಕೆಲಸದ ಮೇಲೆ ಹೋಗುವ ನಾಗರಿಕರಿಗೆ ಇದೀಗ ಟೂವೇ ಪಾಸ್ ವಿತರಿಸಲು ಸೂಚಿಸಲಾಗಿದೆ.

ಲಾಕ್‌ಡೌನ್ ನಿಯಮ ಸಡಿಲಿಕೆಯಿಂದ ಕಾರ್ಖಾನೆಗಳು, ಕೈಗಾರಿಕೆಗಳು ನಿಯಮಿತ ನೌಕರರ ಮೂಲಕ ಆರಂಭಗೊಂಡಿದೆ. ಹೀಗಾಗಿ ಕಾರ್ಮಿಕರು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಕೆಲಸಕ್ಕಾಗಿ ತೆರಳುವುದು ಅನಿವಾರ್ಯವಾಗಿದೆ. ಇನ್ನು ವಿದ್ಯಾರ್ಥಿಗಳು ಸೇರಿದಂತೆ ಇತರರಿಗೂ ಅನೂಕೂಲವಾಗುವಂತೆ ಇದೀಗ ಟೂವೇ ಪಾಸ್ ನೀಡಲಾಗುತ್ತಿದೆ. ಪೊಲೀಸ್ ಇಲಾಖೆ ಅಂತರ್ ಜಿಲ್ಲಾ ಪಾಸ್‌ಗಳನ್ನು ನೀಡಲಿದೆ.

Scroll to Top