ಉಸೇನ್ ಬೋಲ್ಟ್​ಗಿಂತ ಸ್ಪೀಡಾಗಿ ಓಡುತ್ತಾರೆ ತುಳುನಾಡಿನ ಈ ಕಂಬಳವೀರ

ಮಂಗಳೂರು: ವಿಶ್ವಖ್ಯಾತ ಉಸೇನ್ ಬೋಲ್ಟ್​ಗಿಂತ ಸ್ಪೀಡಾಗಿ ಓಡುವ ತುಳುನಾಡಿನ ಕಂಬಳವೀರನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಫೆಬ್ರವರಿ 1ರಂದು ಮಂಗಳೂರಿನ ಮೂಡಬಿದ್ರೆ ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಕೋಣ ಓಡಿಸೋ ಶ್ರೀನಿವಾಸಗೌಡ ಎಂಬುವರು ದಾಖಲೆ ಬರೆದಿದ್ದಾರೆ. ಕೇವಲ ಕೇವಲ 13.62 ಸೆಕೆಂಡ್​ಗಳಲ್ಲಿ 142.50 ಮೀಟರ್ ದೂರ ಕೋಣದ ಹಿಂದೆ ಓಡಿ ದಾಖಲೆ ಬರೆದಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು, ಎಲ್ಲರೂ ನಿಬ್ಬೆರಗಾಗಿದ್ದಾರೆ.

ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿ ನೋಡಿದರೆ ಅದು 9.55 ಸೆಕೆಂಡ್ ಆಗುತ್ತದೆ. ಸದ್ಯ ಶ್ರೀನಿವಾಸಗೌಡ, ಉಸೇನ್ ಬೋಲ್ಟ್​ಗಿಂತ 0.03 ಸೆಕೆಂಡ್​ಗಳಷ್ಟು ಮುಂದಿದ್ದಾರೆ. ಅಲ್ದೆ, ಶ್ರೀನಿವಾಸ ಗೌಡ ಅವರನ್ನು ಉಸೇನ್ ಬೋಲ್ಟ್ ಜೊತೆ ಹೋಲಿಕೆ ಮಾಡಿರುವ ಫೋಟೋ, ವಿಡಿಯೋ ವೈರಲ್ ಆಗ್ತಿದೆ.

ಶ್ರೀನಿವಾಸ ಗೌಡ ಅವರ ಸಾಧನೆಗೆ ಮಾರು ಹೋಗಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಸ್ವತಃ ನವದೆಹಲಿಗೆ ಕರೆಸಿಕೊಂಡು ದೇಶದ ಅತ್ಯುತ್ತಮ ಕೋಚ್​ಗಳಿಂದ ತರಬೇತಿ ನೀಡುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಟ್ಟೀಟ್‌ ಮಾಡಿರುವ ಅವರು, ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್​ಎಐ) ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ. ಒಲಿಂಪಿಕ್ಸ್‌ನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ವಿಶೇಷವಾಗಿ ಅಥ್ಲೆಟಿಕ್ಸ್‌ನಲ್ಲಿ ಮಾನವನ ಸಾಮರ್ಥ್ಯ ಮತ್ತು ಶಕ್ತಿಯ ಅಂತಿಮಘಟ್ಟವನ್ನು ಮೀರಿಸಲಾಗುತ್ತದೆ. ಭಾರತದಲ್ಲಿ ಯಾವುದೇ ಪ್ರತಿಭೆಗಳನ್ನು ಪರೀಕ್ಷಿಸದೆ ಬಿಡುವುದಿಲ್ಲ ಎಂಬುದನ್ನು ನಾನು ಖಾತರಿಪಡಿಸುತ್ತೇನೆ,” ಎಂದು ಮಹೇಂದ್ರ ಆ್ಯಂಡ್​ ಮಹೇಂದ್ರ ಗ್ರೂಪಿನ ಅಧ್ಯಕ್ಷರಾದ ಆನಂದ್​ ಮಹೇಂದ್ರ ಅವರ ಟ್ವೀಟ್​ ಅನ್ನು ಕೊಟ್​ ಮಾಡಿ ತಿಳಿಸಿದ್ದಾರೆ.

Leave a Comment

Scroll to Top