ವಿಶ್ವಸಂಸ್ಥೆಯಲ್ಲಿ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದ ಕರ್ನಾಟಕದ ಸಾಕ್ಷ್ಯಚಿತ್ರ…!

ಬೆಂಗಳೂರು: ಅಮೋಘವರ್ಷ ಜೆ.ಎಸ್, ಕಲ್ಯಾಣ್ ವರ್ಮಾ, ಶರತ್ ಚಂಪತಿ, ವಿಜಯ್ ಮೋಹನ್ ರಾಜ್ ನಿರ್ದೇಶನದ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರ ಈಗ ವಿಶ್ವಸಂಸ್ಥೆಯಲ್ಲಿಯೂ ಗಮನ ಸೆಳೆದಿದೆ.

ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮಾರ್ಚ್ 4 ರಂದು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಆ ಮೂಲಕ ವಿಶ್ವಸಂಸ್ಥೆಯಲ್ಲಿ ಪ್ರದರ್ಶಿತಗೊಂಡ ಮೊದಲ ವೈಲ್ಡ್ ಲೈಫ್ ಸಾಕ್ಷ್ಯಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ಮೊದಲ ನೈಸರ್ಗಿಕ ಸಾಕ್ಷ್ಯಚಿತ್ರವಾಗಿರುವ ‘ವೈಲ್ಡ್ ಕರ್ನಾಟಕ’ ಕ್ಕೆ ಪ್ರಸಿದ್ಧ ಸಂಗೀತ-ನಿರ್ಮಾಪಕ ರಿಕಿ ಕೆಜ್ ಥೀಮ್ ಸಂಗೀತವನ್ನು ಸಂಯೋಜಿಸಿದದ್ದರೆ. ಡೇವಿಡ್ ಅಟೆನ್ಬರೋರವರು ಹಿನ್ನಲೆ ಧ್ವನಿಯನ್ನು ನೀಡಿದ್ದಾರೆ. ಕರ್ನಾಟಕದ ಭೌಗೋಳಿಕ ಚಿತ್ರವನ್ನು ಸಮಗ್ರವಾಗಿ ಕಟ್ಟಿಕೊಟ್ಟಿರುವ ಈ ಸಾಕ್ಷ್ಯ ಚಿತ್ರ ಅಲ್ಟ್ರಾ-ಎಚ್‍ಡಿಯಲ್ಲಿ ನಿರ್ಮಾಣವಾಗಿದೆ. ಇನ್ನೊಂದು ವಿಶೇಷವೆಂದರೆ 52 ನಿಮಿಷಗಳ ಸಾಕ್ಷ್ಯಚಿತ್ರವನ್ನು ನಿರ್ಮಿಸಲು 1500 ದಿನಗಳನ್ನು ತೆಗೆದುಕೊಂಡಿದೆ ಮತ್ತು ಇದಕ್ಕಾಗಿ 15,000 ಗಂಟೆಗಳ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಒಟ್ಟು 20 ಕ್ಯಾಮೆರಾಗಳ 2400 ನಿಮಿಷಗಳ ತುಣುಕನ್ನು ಚಿತ್ರೀಕರಿಸಲಾಗಿದೆ.

Scroll to Top