
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಹಿನ್ನಲೆ ಇಂದು (ಗುರುವಾರ) ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ನಡೆಲಾಗುತ್ತಿದೆ.
ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ, ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿರುವ ಅರ್ಜುನನಿಗೆ ಇಂದಿನಿಂದ ಸುಮಾರು 35O ಕೆ.ಜಿ. ತೂಕದ ಮರದ ಅಂಬಾರಿ, 3OO ಕೆಜಿ ತೂಕದಷ್ಟು ಮರಳಿನ ಮೂಟೆಗಳು ಸೇರಿದಂತೆ ಒಟ್ಟು 65O ಕೆಜಿ ತೂಕವನ್ನು ಕಟ್ಟಿ ತಾಲೀಮು ನಡೆಸಲಾಗಿದೆ.
ಈ ಮೂಲಕ ಆನೆಗಳಿಗೆ ಅಂಬಾರಿ ಹೊರುವ ತರಬೇತಿಯ ಅಂತಿಮ ಸಿದ್ಧತೆ ನಡೆಸಲಾಯಿತು. ರಾಜ ಗಾಂಭೀರ್ಯದಿಂದ ಗಜಪಡೆಯು ಅರಮನೆ, ಕೋಟೆ ಆಂಜನೇಯ ದ್ವಾರದಿಂದ ಕೆ.ಆರ್. ಸರ್ಕಲ್ ಮೂಲಕ ಬನ್ನಿ ಮಂಟಪದ ಕಡೆಗೆ ಹೆಜ್ಜೆ ಹಾಕಿದೆ.
ಇನ್ನು, ಅಭಿಮನ್ಯು, ಧನಂಜಯ ಆನೆಗಳಿಗೂ ಇಂದೇ ತಾಲೀಮು ನೀಡಲಾಗುತ್ತದೆ. ಈ ಗಜಪಡೆಗಳು ಮೈಸೂರು ದಸರಾದಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
You must be logged in to post a comment.