ಅಕ್ಟೋಬರ್ 2ರಂದು ದಸರಾ ಏರ್‌ ಶೋ

ಮೈಸೂರು: ಮೈಸೂರು ದಸರಾ ಉತ್ಸವದ ಅಂಗವಾಗಿ ಈ ಬಾರಿ ಬನ್ನಿಮಂಟಪದ ಮೈದಾನದಲ್ಲಿ ಅಕ್ಟೋಬರ್ 2ರಂದು ದಸರಾ ಏರ್‌ ಶೋ ನಡೆಯಲಿದೆ.

ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮಾಹಿತಿ ನೀಡಿದ್ದು, ಅಕ್ಟೋಬರ್ 2ಕ್ಕೆ ಏರ್ ಶೋ ಫಿಕ್ಸ್ ಆಗಿದೆ. ಈ ಬಗ್ಗೆ ಈಗಾಗಲೇ ರಕ್ಷಣಾ ಇಲಾಖೆಯೊಂದಿಗೆ ಮಾತುಕತೆ ಹಾಗೂ ಪತ್ರ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್ 2ಕ್ಕೆ ಏರ್ ಶೋ ನಡೆಯಲಿದ್ದು, ಈ ಬಾರಿಯ ಏರ್ ಶೋ ನಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನ ರಕ್ಷಣಾ ಇಲಾಖೆ ನಿಗದಿಪಡಿಸಲಿದೆ. ಈ ಬಾರಿ ವೈವಿಧ್ಯಮಯ ಪ್ರದರ್ಶನಗಳಿಗೆ ಒತ್ತು ಕೊಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಕಾರ್ಯದರ್ಶಿಯಿಂದ ರಕ್ಷಣಾ ಇಲಾಖೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

Scroll to Top