ಪ್ರವಾಸಿಗರಿಗಾಗಿ 10 ಭಾಷೆಗಳಲ್ಲಿ ದಸರಾ ವೆಬ್‌ಸೈಟ್‌ ಲಭ್ಯ

ಮೈಸೂರು: 2019ರ ದಸರಾ ಮಹೋತ್ಸವದ ವೆಬ್‌ಸೈಟ್‌ಗೆ ಅಧಿಕೃತವಾಗಿ ಚಾಲನೆ ದೊರೆತಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ.

2019ರ ಮೈಸೂರು ದಸರಾ ಮಹೋತ್ಸವ ಕುರಿತು ಎಲ್ಲಾ ಮಾಹಿತಿಗಳನ್ನು ನೀಡಲು ಕನ್ನಡ, ಇಂಗ್ಲಿಷ್, ಅರೇಬಿಕ್, ಚೈನಿಸ್, ಡಚ್, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪಾನಿಷ್ ಸೇರಿದಂತೆ ಒಟ್ಟು 10 ಭಾಷೆಗಳಲ್ಲಿ ಪ್ರವಾಸಿಗರಿಗಾಗಿ ವೆಬ್‌ಸೈಟ್‌ ತಯಾರಾಗಿದೆ.

ಕಂಪ್ಯೂಟರ್, ಮೊಬೈಲ್, ಟ್ಯಾಬ್ ಕಂಪಾಟಿಬಲ್ ಮೂಲಕವೂ ದಸರಾ ವೆಬ್‌ಸೈಟ್‌ ತೆರೆದು ನೋಡ ಬಹುದಾಗಿದೆಯಲ್ಲದೆ, ಪುಷ್ ನೋಟಿಫಿಕೇಷನ್ ವ್ಯವಸ್ಥೆ ಹಾಗೂ ಅಲರ್ಟ್ ಸೌಲಭ್ಯ ಹೊಂದಿದೆ. ದಸರಾ ಕಾರ್ಯಕ್ರಮಗಳನ್ನು ಗೂಗಲ್ ಕ್ಯಾಲೆಂಡರ್ ಜೊತೆ ಇಂಟಿಗ್ರೇಟ್ ಮಾಡುವ ಅವಕಾಶ ನೀಡಿ ರುವುದರಿಂದ ತಮಗೆ ಬೇಕಾದ ಈವೆಂಟ್‍ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

‘ಮೈಸೂರು ದಸರಾ’ ಬಳಸಿ ದಸರಾ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡ ಬಹುದು. ದಸರಾ ಟಿಕೆಟ್ ಖರೀದಿ, ಪ್ರಮುಖ ಕಾರ್ಯ ಕ್ರಮಗಳ ನೇರಪ್ರಸಾರ, ಅಭಿಪ್ರಾಯ, ಸಲಹೆ, ಮಾರ್ಗದರ್ಶನ ಹಂಚಿಕೊಳ್ಳಲು ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಪುಟವನ್ನು ಮೀಸಲಿರಿಸಲಾಗಿದೆ. ಮೈಸೂರು ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ-ಯಾತ್ರಾ ಸ್ಥಳಗಳ ಮಾಹಿತಿಯನ್ನೂ ದಸರಾ ವೆಬ್‌ಸೈಟ್‌ www.mysoredasara.gov.in ನಲ್ಲಿ ಪಡೆಯಬಹುದಾಗಿದೆ. ವಿವಿಧ ಸರ್ಕಾರಿ ಇಲಾಖೆಗಳ ಜಾಲತಾಣಗಳಿಗೆ ಈ ವೆಬ್ ಅನ್ನು ಲಿಂಕ್ ಮಾಡಿರುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಂಪೂರ್ಣ ಮಾಹಿತಿ ಪಡೆಯಲು ಅನುಕೂಲವಾಗಿದೆ.

ದಸರಾ ವೆಬ್‌ಸೈಟ್‌: https://www.mysoredasara.gov.in

Scroll to Top