ದಸರ ಪ್ರಯುಕ್ತ ಜಾಲಿ ಹೆಲಿಕಾಪ್ಟರ್ ರೈಡ್ ಆಯೋಜನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ದಸರ ಪ್ರಯುಕ್ತ ಆಗಸದಲ್ಲಿ ಜಾಲಿ ರೈಡ್‍ ಆಯೋಜನೆ.

ಹೆಲಿ ಟ್ಯೂರಿಸಂನ್ನು ಉತ್ತೇಜಿಸುವ ಹಾಗೂ ಎಲ್ಲರಗೂ ಹೆಲಿಕಾಪ್ಟರ್ ಪ್ರಯಾಣವನ್ನು ಪರಿಚಯಿಸುವ ನಿಟ್ಟಿನಲ್ಲಿ ದಸರಾ ಸಂದರ್ಭದಲ್ಲಿ ಈ ಜಾಲಿ ರೈಡ್ ಆಯೋಜನೆ ಮಾಡಲಾಗಿದೆ.

ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಬಸ್ ನಿಲ್ದಾಣ, ಲಲಿತ ಮಹಲ್ ಪ್ಯಾಲೇಸ್, ಕುಕ್ಕರಹಳ್ಳಿ ಕೆರೆ, ರೈಲ್ವೆ ನಿಲ್ದಾಣ, ಜಗಮೋಹನ ಅರಮನೆ, ದಸರ ವಸ್ತು ಪ್ರದರ್ಶನ, ಕೆ.ಆರ್.ವೃತ್ತ ಸೇರಿದಂತೆ ಇನ್ನಿತರ ಸ್ಥಳಗಳನ್ನು ಆಗಸದಿಂದ ವೀಕ್ಷಸಬಹುದಾಗಿದೆ.

ಸೆಪ್ಟಂಬರ್ 27 ರಿಂದ ಅಕ್ಟೋಬರ್ 10 ರವರಗೆ ಜಾಲಿ ರೈಟ್ ಆರಂಭವಾಗಗಲಿದ್ದು, ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ಸೆ.27 ರಂದು ಜಾಲಿ ರೈಡ್ ಗೆ ಅಧಿಕೃತ ಚಾಲನೆ.

Scroll to Top