‘ಯುವ ಸಂಭ್ರಮ’ಕ್ಕೆ ದಿನಾಂಕ ನಿಗದಿ: ಗೊಲ್ಡನ್ ಸ್ಟಾರ್ ಗಣೇಶ್’ರಿಂದ ಉದ್ಘಾಟನೆ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ಯುವ ಸಮೂಹದ ಮನ ತಣಿಸುವ ‘ಯುವ ಸಂಭ್ರಮ’ ಕಾರ್ಯಕ್ರಮವು ಸೆ.17 ರಿಂದ 25 ರವರಗೆ ನಡೆಯಲಿದೆ.

9 ದಿನಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಯುತ್ತದೆ.

ಪ್ರತಿ ದಿನ ಸಂಜೆ 5:30 ರಿಂದ 10 :30 ರವರಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಲಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 278 ಕಾಲೇಜುಗಳು ಭಾಗಿಯಾಗುತ್ತಿವೆ. ಈ ಬಾರಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಇನ್ನು ಯುವ ಸಂಭ್ರಮವನ್ನು ನಟ ಗೊಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಲಿದ್ದಾರೆ. ಈ ಬಾರಿ ಕಿರುನಾಟಕ,ಮೈಮ್ ಇತ್ಯಾದಿ ಕಲಾ ಪ್ರಕಾರಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಪರಿಸರ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ,ಹುಲಿ ಸಂರಕ್ಷಣೆ, ಮಹಿಳಾ ಸಬಲೀಕರಣ,ವಿಷಯಾಧಾರಿತ ಕಾರ್ಯಕ್ರಮಕ್ಕೆ ಅಧ್ಯತೆ. ಪ್ರತಿ ತಂಡಗಳಿಗೂ ಕನಿಷ್ಟ 25 ರಿಂದ 50 ವಿಧ್ಯಾರ್ಥಿಗಳಿಗೆ ಕಾರ್ಯಕ್ರಮ ನೀಡಲು ಅವಕಾಶ.

ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಯುವದಸರಾದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ದೂರದ ಊರುಗಳಿಂದ ಬರುವ ಕಾಲೇಜು ತಂಡಗಳಿಗೆ ಬಸ್,ವಾಸ್ಥವ್ಯ ವ್ಯವಸ್ಥೆ ಮಾಡಲಾಗುತ್ತದೆ.

Scroll to Top