ದಸರೆಯ ರಂಗೇರಿಸಲು ಸೆ.15 ರಿಂದ ಆರಂಭವಾಗಲಿದೆ ‘ಯುವ ಸಂಭ್ರಮ’

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಮನಸ್ಸುಗಳನ್ನ ಕುಣಿಸಿ ತಣಿಸುವ ‘ಯುವ ಸಂಭ್ರಮ’ ಸೆಪ್ಟಂಬರ್ 15ರಿಂದ ಆರಂಭವಾಗಲಿದೆ.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯುವಸಂಭ್ರಮ ಕಾರ್ಯಕ್ರಮವನ್ನು ಸೆ.15 ರಿಂದ 8 ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ಸಿದ್ದತೆ ನಡೆಸಿದೆ.

ಈ ಬಾರಿ ನೃತ್ಯ ಕಾರ್ಯಕ್ರಮದೊಂದಿಗೆ ಸ್ಕಿಟ್, ಏಕ ಪಾತ್ರಾಭಿನಯ ಹಾಗೂ ಬ್ಯಾಂಡ್ ಮ್ಯೂಸಿಕ್‌ಗೆ ಅವಕಾಶ ನೀಡಲಾಗಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲು ಉದ್ದೇಶದಿಂದ ನೃತ್ಯದ ಜೊತೆಗೆ ಇತರೆ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ವಿವಿಧ ಕಾರ್ಯಕ್ರಮಗಳು ಯುವಜನತೆಯ ಮನತಣಿಸಲಿವೆ.

ಇನ್ನು ಸೆಪ್ಟಂಬರ್ 28 ರಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

Scroll to Top