ಅಕ್ಟೋಬರ್ 2 ರಂದು‌ ದಸರಾ ಏರ್ ಶೋ:ಭಾರತೀಯ ವಾಯುಪಡೆಯ ಸಾಹಸವನ್ನು ನೀವು ಕಣ್ತುಂಬಿಕೊಳ್ಳಿ

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಇಂಡಿಯನ್ ಏರ್ ಫೋರ್ಸ್ ‌ಸಹಯೋಗದಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ನಗರದ ಬನ್ನಿಮಂಟಪ ಮೈದಾನದಲ್ಲಿ ಅಕ್ಟೋಬರ್ 2 ರಂದು‌ ಬೆಳಿಗ್ಗೆ 11.30 ಕ್ಕೆ ಏರ್ ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು ನಗರದಲ್ಲಿ ‌ಏರ್ ಶೋ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ವೀಕ್ಷಕರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬರಬೇಕು ಎಂದು ತಿಳಿಸಿದರು.

ಭಾರತೀಯ ವಾಯು ಪಡೆಯಿಂದ ನಡೆಯುವ ಈ ಕಾರ್ಯಕ್ರಮ ಸುಮಾರು 40 ನಿಮಿಷಗಳದಾಗಿದ್ದು, ಪೆಟಲ್ ರಾಪಿಂಗ್, ಆಪರೇಷನ್ ಹಾಗೂ ಸ್ಕೈ ಡೈವಿಂಗ್ ಸಾಹಸಗಳನ್ನು ಮಾಡಲಿದೆ. ಇದಕ್ಕೆ ಈಗಾಗಲೇ ರಿಹರ್ಸಲ್ ಕೂಡ ಮಾಡಿಕೊಳ್ಳಲಾಗುತ್ತಿದೆ.

Leave a Comment

Scroll to Top