ದಸರಾ ಕ್ರೀಡಾಕೂಟ, ಯುವ ದಸರಾವನ್ನು ಉದ್ಘಾಟಿಸಲಿದ್ದಾರೆ ಪಿ.ವಿ ಸಿಂಧು..!

ಮೈಸೂರು: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಂದ 2019ರ ದಸರಾ ಕ್ರೀಡಾಕೂಟ ಹಾಗೂ ಯುವ ದಸರಾವನ್ನು ಉದ್ಘಾಟಿಸಲು ಮೈಸೂರು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಈ ಕುರಿತು ಪ್ರಕ್ರಿಯೆ ಆರಂಭಿಸಿರುವ ಅಧಿಕಾರಿಗಳು, ಸಿಂಧು ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಈಗಾಗಲೇ ಮೌಖಿಕವಾಗಿ ಆಹ್ವಾನಿಸಿದ್ದಾರೆ. ದಸರಾ ಕ್ರೀಡಾಕೂಟ ಹಾಗೂ ಯುವ ದಸರಾ ಕಾರ್ಯಕ್ರಮಗಳ ವೇಳಾಪಟ್ಟಿ, ಸ್ಥಳ ನಿಗದಿಯಾಗುತ್ತಿದ್ದಂತೆಯೇ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 1ರಂದು ಬೆಳಗ್ಗೆ ದಸರಾ ಕ್ರೀಡಾಕೂಟ ಹಾಗೂ ಸಂಜೆ ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಚಿಂತನೆ ನಡೆಸಲಾಗಿದೆ. ಪಿ.ವಿ ಸಿಂಧು ಅವರ ಲಭ್ಯತೆ ನೋಡಿಕೊಂಡು ಕ್ರೀಡಾ ಸಚಿವರ ಸಮಯಾವಕಾಶ ಸಿಕ್ಕಿದ ತಕ್ಷಣ ದಸರಾ ಕ್ರೀಡಾಕೂಟ ಉದ್ಘಾಟನೆಗೆ ದಿನಾಂಕ ನನಿಗದಿಪಡಿಸಿ ಅಂದೇ ಸಂಜೆ ಯುವ ದಸರಾ ಉದ್ಘಾಟನೆಯನ್ನೂ ನಿಗದಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Scroll to Top