ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿದ್ಯುತ್ ದೀಪಗಳ ಅಲಂಕಾರ ವಿಶೇಷ ಆಕರ್ಷಣೆಯಾಗಿದ್ದು, ಈ ಬಾರಿ ದಸರಾ ಉತ್ಸವದಲ್ಲಿ ದೀಪಾಲಂಕಾರವನ್ನು 10 ದಿನಗಳಿಗೆ ಮಾತ್ರ ಸೀಮಿತಗೊಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಮೈಸೂರು ದಸರಾವನ್ನು ಸರಳದಲ್ಲೇ ಅತಿ ಸರಳವಾಗಿ ಆಚರಣೆ ಮಾಡಲು ಸರ್ಕಾರ ಮುಂದಾಗಿದ್ದು ಈ ಬಾರಿ ದೀಪಾಲಂಕಾರವನ್ನು 10 ದಿನಗಳಿಗೆ ಮಾತ್ರ ಸೀಮಿತವಾಗಿರಲಿದೆ. ಅಲ್ಲದೆ ಪ್ರತಿದಿನ ಕೇವಲ ಎರಡೇ ಗಂಟೆಗಳು ಮಾತ್ರ ದೀಪಾಲಂಕಾರ ಝಗಮಗಿಸಲಿದ್ದು ಈ ಬಗ್ಗೆ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಮಾಡಿದೆ. ಸಂಜೆ 7ರಿಂದ 9 ಗಂಟೆಗಳ ವರಗೆ ಮಾತ್ರ ವಿದ್ಯುತ್ ದೀಪಾಲಂಕಾರ ರಂಜಿಸಲಿದ್ದು, ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ದೀಪಾಲಂಕಾರಕ್ಕೆ ಅವಕಾಶ ನೀಡಲಾಗಿದೆ.
ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ನಗರದಲ್ಲಿ ಈಗಾಗಲೇ ದೀಪಾಲಂಕಾರ ಮಾಡುವ ಕಾರ್ಯ ಆರಂಭವಾಗಿದೆ. ಬಹುತೇಕ ಕಡೆ ದೀಪಾಲಂಕಾರ ಮುಗಿದಿದೆ.
ಇನ್ನು ದೀಪಾಲಂಕಾರ ವೀಕ್ಷಣೆ ಮಾಡಲು ಬರುವವರಿಗೆ ಕೋವಿಡ್ ನಿಯಮಗಳು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕೂಡ ಕಡ್ಡಾಯವಾಗಿದೆ.