ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಕೇಂದ್ರದಿಂದ 100 ಕೋಟಿ‌ ಅನುದಾನ..!

ಮೈಸೂರು: ಕೇಂದ್ರ ಸರ್ಕಾರವು ಯಾತ್ರಾಸ್ಥಳಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಮೈಸೂರಿನ ಪ್ರಸಿದ್ಧ ಪುಣ್ಯಕ್ಷೇತ್ರ ಚಾಮುಂಡಿ ಬೆಟ್ಟ ವನ್ನು ಸುಮಾರು 100 ಕೋಟಿ‌ ರೂ ಅನುದಾನದಲ್ಲಿ ಅಭಿವೃದ್ಧಿ ಪಡಿಸುವ ತೀರ್ಮಾನ ಕೈಗೊಂಡಿದೆ.

ಈ ಬಗ್ಗೆ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಅವರು ಮಾಧ್ಯಮ ಹೇಳಿಕೆ ನೀಡಿದ್ದಾರೆ. ಪುರಿ, ದ್ವಾರಕೆ, ಅಮರಾವತಿ, ಗಯಾ, ಅಮೃತಸರ, ಅಜ್ಮೇರ್, ಕಾಂಚೀಪುರ, ವಾರಣಾಸಿ ಹಾಗೂ ಮಥುರಾ‌ ತೀರ್ಥಕ್ಷೇತ್ರಗಳ ಜೊತೆಗೆ ಮೈಸೂರಿನ ಚಾಮುಂಡಿ ಬೆಟ್ಟ ವನ್ನು ಅಭಿವೃದ್ಧಿ ಪಡಿಸುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಈ ಅಭಿವೃದ್ಧಿ ಯೋಜನೆಯು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದು, ಚಾಮುಂಡಿ ಬೆಟ್ಟವನ್ನು ತೀರ್ಥಕ್ಷೇತ್ರವಾಗಿಯಷ್ಟೇ ಅಭಿವೃದ್ಧಿ ಪಡಿಸುತ್ತದೆ. ಯಾವುದೇ ರೀತಿಯ ಕಾಂಕ್ರೀಟ್ ನಿರ್ಮಾಣಗಳಿಲ್ಲದೆ, ಅಲ್ಲಿನ ಪರಿಸರದ, ಜೀವಸಂಕುಲದ ಅಭಿವೃದ್ಧಿಗೆ ಈ‌‌ ಯೋಜನೆ ಸಹಕಾರಿಯಾಗಲಿದೆ.

ಕೇಂದ್ರ ಸರ್ಕಾರ‌ ಒದಗಿಸುವ 100 ಕೋಟಿ ರೂಗಳು ಸಂಪೂರ್ಣ ಒಳಿತಿಗೆ ವಿನಿಯೋಗವಾಗಿ, ಚಾಮುಂಡಿ ಬೆಟ್ಟದ ಪ್ರಕೃತಿ ಸೌಂದರ್ಯ ಇನ್ನಷ್ಟು ಹೆಚ್ಚುವಂತಾಗಲಿ. ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದಿರಲಿ ಎಂದಿದ್ದಾರೆ.

Scroll to Top