ಮೈಸೂರು: ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರಿಗೆ ಹೋಂ ಕ್ವಾರಂಟೈನ್’ಗೆ ಅವಕಾಶವಿಲ್ಲ. ಬದಲಿಗೆ ಹಾಸ್ಟೆಲ್ (ಉಚಿತ) ಅಥವಾ ಲಾಡ್ಜ್ (ಹಣ ಪಾವತಿಸಬೇಕು)ನಲ್ಲಿ ಕ್ವಾರಂಟೈನ್’ಗೆ ಒಳಗಾಗಬೇಕು ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.
ಮೈಸೂರಿನಲ್ಲಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸುವ ಎಲ್ಲಾ ಅಂತರ ರಾಜ್ಯ ಪ್ರಯಾಣಿಕರನ್ನು 14 ದಿನಗಳವರೆಗೆ ಫೆಸಿಲಿಟಿ ಕ್ಯಾರೆಂಟೈನ್‌ಗೆ ಒಳಪಡಿಸಲಾಗುತ್ತದೆ. ನೀವು ಹಾಸ್ಟೆಲ್ ನಲ್ಲಿ (ಉಚಿತವಾಗಿ) ಅಥವಾ ಹೋಟೆಲ್ ನಲ್ಲಿ (ಪಾವತಿ ಆಧಾರದ ಮೇಲೆ) ಆಯ್ಕೆ ಮಾಡಿಕೊಳ್ಳಬಹುದು.
ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕ್ವಾರೆಂಟೈನ್ ಗೆ ಒಳಪಡಿಸಲಾಗುತ್ತಿದ್ದು, ಆಗಮನದ 14 ನೇ ದಿನದಂದು ಎಲ್ಲಾ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಹೊರ ಜಿಲ್ಲೆಯಿಂದ ಬಂದವರು ಕ್ವಾರೆಂಟೈನ್ ಗೆ ಸಹಕರಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ತಿಳಿಸಿದ್ದಾರೆ.
ಆದರೆ ಅಂತರ್ ಜಿಲ್ಲೆಯ ಪ್ರಯಾಣಿಕರನ್ನು ಕ್ವಾರೆಂಟೈನ್ ಗೆ ಒಳಪಡಿಸಲಾಗಲ್ಲ ಎಂದು ಸ್ಪಷ್ಟಪಡಿಸಿದೆ.