ಚಾಮುಂಡಿ ಬೆಟ್ಟದಲ್ಲಿ 150 ವಾಣಿಜ್ಯ ಮಳಿಗೆಗಳ ನಿರ್ಮಾಣ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಎರಡನೇ ಹಂತದ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ನ.15ರಂದು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.

ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಮೊದಲ ಹಂತದಲ್ಲಿ 100 ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಉಳಿದ ನೂರು ಜನಕ್ಕೆ ಎರಡನೇ ಹಂತದಲ್ಲಿ ಮಳಿಗೆ ನಿರ್ಮಿಸಿಕೊಡಲಾಗುವುದು. ಬೆಟ್ಟದಲ್ಲಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ. ಹಾಗಾಗಿ ಮಳಿಗೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

‘ಬಹುಮಹಡಿ ವಾಹನ ನಿಲ್ದಾಣದ ಬಳಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ನ.15ರಂದು ಭೂಮಿ ಪೂಜೆ ಮಾಡಲಾಗುವುದು. ಇಲ್ಲಿ 150 ವಾಣಿಜ್ಯ ಮಳಿಗೆ ನಿರ್ಮಿಸುತ್ತೇವೆ. ಮಳಿಗೆಗಳ ಜತೆಗೆ ಸ್ನಾನ, ಶೌಚಗೃಹಗಳನ್ನು ನಿರ್ಮಿಸಿಕೊಟ್ಟರೆ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ದೇವಿಕೆರೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಚಾಮುಂಡಿಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಭದ್ರತೆಗಾಗಿ ಬೆಟ್ಟದಲ್ಲಿಯೇ ಪೊಲೀಸ್ ಠಾಣೆಯೊಂದನ್ನು ನಿರ್ಮಿಸಬೇಕು ಎಂದು ನಗರ ಪೊಲೀಸ್ ಕಮೀಷನರ್ ಕೆ.ಟಿ.ಬಾಲಕೃಷ್ಣ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.

ಪರಿಸರವಾದಿಗಳಿಂದ ವಿರೋಧ:

ಚಾಮುಂಡಿ ಬೆಟ್ಟದಲ್ಲಿ ಮತ್ತೆ ವಿವಿಧ ಯೋಜನೆಗೆ ಮುಂದಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮೈಸೂರಿನ ಪರಿಸರವಾದಿಗಳು ಈಗಾಗಲೆ ಬೆಟ್ಟದ ಮೇಲೆ ಅನಧಿಕೃತವಾಗಿ ನೂರಾರು ಮನೆಗಳು ತಲೆ ಎತ್ತಿವೆ. ಹೀಗಾಗಿ ಬೆಟ್ಟದ ಮೇಲ್ಭಾಗ ಮಿನಿ ನಗರವಾಗಿ ಪರಿವರ್ತನೆಯಾ ಗಿದೆ. ತದ ನಂತರ ಸಾರ್ವಜನಿಕರ ವಿರೋಧದ ನಡುವೆಯೂ ಅಂದಾಜು 15 ಎಕರೆ ಜಾಗದಲ್ಲಿಬಹುಮಹಡಿ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲಾ ಯಿತು. ಇದರಿಂದಾಗಿ ಈ ಕಟ್ಟಡದ ಕೆಳಭಾಗದ ದೇವಿ ಕೆರೆಗೆ ನೀರು ಸೇರದಂತಾಗಿದೆ. ಇತ್ತೀಚೆಗೆ ಬೆಟ್ಟದ ಮೇಲೆ ಮರ ಗಿಡಗಳ ಬದಲಿಗೆ ಎತ್ತ ನೋಡಿದರೂ ಕಾಂಕ್ರಿಟ್‌ ಕಟ್ಟಡಗಳೇ ಕಂಡು ಬರುತ್ತಿವೆ. ಹೀಗಿರು ವಾಗ ಬೆಟ್ಟದ ಮೇಲ್ಭಾಗದಲ್ಲಿಮತ್ತಷ್ಟು ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿ ರುವುದು ಪರಿಸರ ವಿರೋಧಿ ನೀತಿಯಾ ಗಿದೆ ಎಂಬುದು ಪರಿಸರವಾದಿಗಳ ಆರೋಪವಾಗಿದೆ.

Scroll to Top