
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಒಂದೇ ದಿನ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು ಮುಂಜಾನೆ ಮೂವರಲ್ಲಿ ಕೊರೋನಾ ಇರುವುದು ಪರೀಕ್ಷೆಯಲ್ಲಿ ಧೃಡಪಟ್ಟಿತ್ತು. ಇದೀಗ ಸಂಜೆ ವೇಳೆಗೆ ಮತ್ತೆ ಇಬ್ಬರಲ್ಲಿ ಸೋಂಕು ಇರುವುದ ಧೃಡಪಟ್ಟಿದೆ. ಸೋಂಕಿತ 52ನೇ ರೋಗಿಯ ಸಂಪರ್ಕ ದಲ್ಲಿದ್ದ 27ವರ್ಷದ ಮಹಿಳೆ ಹಾಗೂ ವೃದ್ದರೊಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಇಬ್ಬರನ್ನೂ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 19ಕ್ಕೇರಿದೆ.
ಇನ್ನು ಸೋಂಕಿತರಲ್ಲಿ ಇಬ್ಬರನ್ನು ಹೊರತು ಪಡಿಸಿ 17 ಜನರು ಜ್ಯುಬಿಲಿಯೆಂಟ್ ನೌಕರರು ಹಾಗೂ ಅವರಿಗೆ ಸಂಬಂಧಿಸಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಮಾಹಿತಿ ನೀಡಿದ್ದಾರೆ.
